Search
  • Follow NativePlanet
Share
ಮುಖಪುಟ » ಸ್ಥಳಗಳು » ಲಖನೌ » ಆಕರ್ಷಣೆಗಳು » ಫಿರಂಗಿ ಮಹಲ್

ಫಿರಂಗಿ ಮಹಲ್, ಲಖನೌ

1

ಫಿರಂಗಿ ಮಹಲ್ ವಿಕ್ಟೋರಿಯಾ ರಸ್ತೆ ಮತ್ತು ಲಖನೌನ ಚೌಕ್‍ನ ನಡುವೆ ನೆಲೆಗೊಂಡಿದೆ. ಭವ್ಯವಾದ ಈ ಕಟ್ಟಡವು ಫಿರಂಗಿ ಎನ್ನುವ ಯೂರೋಪಿಯನ್ನರಿಗೆ ಸೇರಿದ್ದಾಗಿತ್ತು. ಹಾಗಾಗಿ ಈ ಹೆಸರು ಬಂದಿದೆ. ಸತ್ಯಾಂಶವೇನೆಂದರೆ ಇದು ನೀಲ್ ಎಂಬ ಫ್ರೆಂಚ್ ಉದ್ಯಮಿಗೆ ಸೇರಿತ್ತು. ಈತನು ಮೊಘಲ್ ದೊರೆ ಔರಂಗಜೇಬನ ಕಾಲದಲ್ಲಿ ಇನ್ನಿತರ ಫ್ರೆಂಚ್ ವರ್ತಕರ ಜೊತೆಯಲ್ಲಿ ಇಲ್ಲಿ ವಾಸವಾಗಿದ್ದನು. ಈ ಭವ್ಯವಾದ ಅರಮನೆಯನ್ನು ಸರ್ಕಾರವು ರಾಜ ಸ್ವಾಮ್ಯದ ಕಾನೂನಿನಡಿಯಲ್ಲಿ, ವಿದೇಶಿ ವ್ಯಕ್ತಿಯ ಆಸ್ತಿ ಎಂಬ ಲೆಕ್ಕದಲ್ಲಿ ತನ್ನ ವಶಕ್ಕೆ ತೆಗೆದುಕೊಂಡಿತು.

ನಂತರ ಇದನ್ನು ಚಕ್ರವರ್ತಿಯ ಇಸ್ಲಾಮಿಕ್ ಸಲಹೆಗಾರರಾಗಿ ಕಾರ್ಯ ನಿರ್ವಹಿಸುತ್ತಿದ್ದ, ಮುಲ್ಲಾ ಅಸದ್ ಬಿನ್ ಖುತುಬ್ ಶಹೀದ್ ಮತ್ತು ಆತನ ಸಹೋದರ ಮುಲ್ಲಾ ಅಸದ್ ಬಿನ್ ಖುತುಬ್ ಉದ್ದಿನ್ ಶಹೀದ್‍ರವರಿಗೆ ನೀಡಲಾಯಿತು. ಈ ಸಹೋದರರು ಇದನ್ನು ಒಂದು ದೊಡ್ಡ ಇಸ್ಲಾಮಿಕ್ ಸಂಸ್ಥೆಯಾಗಿ ಪರಿವರ್ತಿಸಿದರು. ಈ ಸಂಸ್ಥೆಯ ಸ್ಥಾನಮಾನವನ್ನು ಇಂಗ್ಲೇಂಡಿನ ಕೇಂಬ್ರಿಡ್ಜ್ ಮತ್ತು ಆಕ್ಸ್ ಫೊರ್ಡ್ ವಿಶ್ವವಿದ್ಯಾನಿಲಯಗಳ ಮಟ್ಟಕ್ಕೆ ಹೋಲಿಸಲಾಗುತ್ತಿತ್ತು.  ಮಹಾತ್ಮ ಗಾಂಧಿಯವರು ಸಹ ಫಿರಂಗಿ ಮಹಲಿನಲ್ಲಿ ಕೆಲ ಕಾಲ ತಂಗಿದ್ದರು. ಅವರು ಉಳಿದುಕೊಂಡಿದ್ದ ಕೋಣೆಯನ್ನು ಅವರ ಸ್ಮಾರಕವಾಗಿ ಇಂದಿಗು ಉಳಿಸಿಕೊಳ್ಳಲಾಗಿದೆ. ಫಿರಂಗಿ ಮಹಲ್ ಇಸ್ಲಾಮಿನ ಸಂಸ್ಕೃತಿ ಮತ್ತು ಸಂಪ್ರದಾಯಗಳನ್ನು ಉಳಿಸಿ, ಬೆಳೆಸಲು ಗಣನೀಯವಾದ ಕೊಡುಗೆಯನ್ನು ನೀಡಿದೆ.

One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Mar,Tue
Check Out
11 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Mar,Tue
Return On
11 Mar,Wed