1759-1806ರಲ್ಲಿ ಷಾ ಆಲಂ ದ್ವಿತೀಯ ಲಖನೌನಲ್ಲಿ ಅಮೀನಾಬಾದ್ ನ್ನು ಮಾರುಕಟ್ಟೆಯನ್ನಾಗಿ ಅಭಿವೃದ್ಧಿಪಡಿಲು ಆರಂಭಿಸಿದ. ಆತ ಇಮಾಂಬರಾ, ಫೀಲ್ ಖಾನ ಮತ್ತು ಉದ್ಯಾನದೊಂದಿಗೆ ಹಲವಾರು ಅಂಗಡಿಗಳನ್ನು ನಿರ್ಮಿಸಿದ. ಆತನ ಮರಣಾನಂತರ ಆತನ ಪತ್ನಿ ನವಾಬ ವಜಿದ್ ಅಲಿ ಖಾನ್ ಗೆ ಸಚಿವರಾಗಿದ್ದ ಇಮ್ದಾದ್ ಹುಸೇನ್ ಖಾನ್ ಅಮಿನದದೌಲಾಗೆ ಈ ಮಾರುಕಟ್ಟೆಯನ್ನು ವಿಲೇವಾರಿ ಮಾಡಿದಳು. ಆತ ಹಲವಾರು ತೋಟಗಳು, ಉದ್ಯಾನಗಳು, ದೊಡ್ಡ ಮನೆ, ಮಸೀದಿ ಮತ್ತು ಒಂದು ಮಾರುಕಟ್ಟೆಯನ್ನು ನಿರ್ಮಿಸಿದ ಮತ್ತು ಇದಕ್ಕೆ ಅಮೀನಾಬಾದ್ ಎಂದು ಹೆಸರಿಟ್ಟ.
ಅಮೀನಾಬಾದ್ ನ ವಿಸ್ತಾರವಾದ ಮಾರುಕಟ್ಟೆ ಕಾಂಪ್ಲೆಕ್ಸ್ ನಲ್ಲಿ ಉದ್ಯಾನವನ್ನು 1911 ಫೆಬ್ರವರಿ 18ರಂದು ಲೆಫ್ಟಿನೆಂಟ್ ಜನರಲ್ ಹೆವಿಟ್ ಉದ್ಘಾಟಸಿದರು. ಅಮೀನಾಬಾದ್ ನ್ನು ಲಖನೌನ ಹೃದಯವೆನ್ನಲಾಗುತ್ತದೆ.ಮಾರುಕಟ್ಟೆಯು ಸುಮಾರು 165 ವರ್ಷ ಹಳೆಯದ್ದಾಗಿದ್ದು, ಇದು ಪ್ರತಾಪ್ ಮಾರುಕಟ್ಟೆ, ಸ್ವದೇಶಿ ಮಾರುಕಟ್ಟೆ, ಮೋಹನ್ ಮಾರುಕಟ್ಟೆ ಸಹಿತ ಹಲವಾರು ಮಾರುಕಟ್ಟೆಗಳ ವಾಣಿಜ್ಯ ಕೂಟವಾಗಿದೆ. ತುಂದೆ ಕಬಾಬ್, ದ್ವಿವೇದಿ ಸೀರೆ, ಪ್ರಕಾಶ್ ಕುಲ್ಫಿ, ಮತಬದಾಲ್ ಪನ್ಸಾರಿ ಮುಂತಾದವು ಇಲ್ಲಿನ ಕೆಲವು ಬ್ರಾಂಡ್ ಹೆಸರುಗಳಾಗಿವೆ.


Click it and Unblock the Notifications