ಲೇಹ್ ಪಟ್ಟಣದಿಂದ 19 ಕಿ.ಮೀ. ದೂರದಲ್ಲಿದೆ ಥಿಕ್ಸೆ ಆಶ್ರಮ. ಮಧ್ಯಯುಗ ಕಾಲದ ಆಕರ್ಷಕ ವಾಸ್ತುಶಿಲ್ಪ ಮಾದರಿಯನ್ನು ಇದು ಹೊಂದಿದೆ. ಈ ಭಾಗದ ಅತಿ ದೊಡ್ಡ ಆಶ್ರಮ ಎಂಬ ಖ್ಯಾತಿಯೂ ಇದಕ್ಕಿದೆ. 12 ಅಂತಸ್ತುಗಳನ್ನು ಇದು ಹೊಂದಿದೆ. ಅತ್ಯಾಕರ್ಷಕ ಗೋಡೆ ಪೇಂಟಿಂಗ್, ಸ್ತೂಪಗಳು, ಮೂರ್ತಿಗಳು, ಆಯುಧಗಳು ಆಶ್ರಮದ ಒಳಗೆ ಗಮನ ಸೆಳೆಯುತ್ತವೆ.
ಬುದ್ಧನ ಭೋದನೆ ಹಾಗೂ ಯೋಚನೆಗಳನ್ನು ಕೆತ್ತಿದ ಬೃಹತ್ ಸ್ತೂಪ ಅಥವಾ ಕಂಬವೊಂದು ಇಲ್ಲಿದೆ. ಪ್ರತಿವರ್ಷ ಆಶ್ರಮವು ಥಿಕ್ಸೆ ಉತ್ಸವವನ್ನು ಎರಡು ದಿನಗಳ ಕಾಲ ಆಯೋಜಿಸುತ್ತದೆ. ಅಪಾರ ಸಂಖ್ಯೆಯಲ್ಲಿ ನಾಗರಿಕರು ಇದರಲ್ಲಿ ಪಾಲ್ಗೊಳ್ಳುತ್ತಾರೆ. ಮಾಸ್ಟೊ ಗೊಂಪಾ ಹಾಗೂ ಶೇ ಗೊಂಪಾ ಇದಕ್ಕೆ ಸಮೀಪದಲ್ಲಿರುವ ಇತರೆ ಆಕರ್ಷಣೆಗಳು.


Click it and Unblock the Notifications