ಕುನ್‌ಝುಮ್ ಪಾಸ್‌ಅನ್ನು ಕುನ್‌ಝುಮ್ ಲಾ ಎಂದೂ ಕರೆಯಲಾಗುತ್ತದೆ. ಕುನ್‌ಝುಮ್ ಪರ್ವತ ಶ್ರೇಣಿಯ ಪೂರ್ವಕ್ಕೆ ಈ ಪ್ರದೇಶವಿದೆ. ಸಮುದ್ರ ಮಟ್ಟದಿಂದ ಸುಮಾರು 4590 ಮೀಟರ್ ಎತ್ತರದಲ್ಲಿದ್ದು ಮನಾಲಿಯಿಂದ 122 ಕಿ.ಮೀ ದೂರದಲ್ಲಿದೆ. ಹಿಮಾಚಲ ಪ್ರದೇಶದ ಸ್ಪಿತಿ ವ್ಯಾಲಿ, ಲಾಹೌಲ್ ವ್ಯಾಲಿ ಮತ್ತು ಕುಲು ವ್ಯಾಲಿಗಳು ಇದರ ವ್ಯಾಪ್ತಿಯಲ್ಲಿವೆ. ಪ್ರವಾಸಿಗರು ಈ ಪಾಸ್‌ನ ತುತ್ತ ತುದಿಯಲ್ಲಿರುವ ದುರ್ಗಾದೇವಿಯ ದೇವಸ್ಥಾನಕ್ಕೆ ಭೇಟಿ ನೀಡಬಹುದು.
ರೋಹ್‌ಟಂಗ್ ಪಾಸ್‌ನಿಂದ 20 ಕಿ.ಮೀ ದೂರ ಸಾಗಿ ಗ್ರಾಂಪೂ ಬಳಿ ಬಲಗಡೆಗೆ ತಿರುಗಿದರೆ ಕುನ್‌ಝುಮ್ ಪಾಸ್ ಸಿಗುತ್ತದೆ. ಈ ದಾರಿಯಲ್ಲಿ ಪ್ರಯಾಣಿಸುವಾಗ ಬಾರಾ-ಸಿಗ್ರಿ ಹಿಮನದಿಯನ್ನು ನೋಡಬಹುದು. ಇದು ಜಗತ್ತಿನಲ್ಲೇ ಎರಡನೇ ಅತಿದೊಡ್ಡ ಹಿಮನದಿ. ಬಟಲ್ ಸಿ.ಬಿ ಅಥವಾ ಚಂದ್ರಭಾಗ, ಮನಾಲಿ, ಕೀಲಾಂಗ್, ದರ್ಚಾ, ಬರಲಾಚಾ ಲಾ, ಸರ್ಚು, ಟ್ಯಾಂಗ್‌ಲಾಂಗ್ ಮತ್ತು ಪಂಗಿ ವ್ಯಾಲಿಯು ಕುನ್‌ಝುಮ್ ಪಾಸ್ ಸಮೀಪದ ಇತರ ಆಕರ್ಷಕ ಸ್ಥಳಗಳು.


Click it and Unblock the Notifications