ಲಾಡ್ನೂವಿನಿಂದ 25 ಕಿ.ಮೀ ದೂರದಲ್ಲಿ ಈ ಧಾಮವು ನೆಲೆಸಿದೆ. ಈ ಧಾಮದಲ್ಲಿ ಸೊಗಸಾಗಿರುವ ಭಾರತದ 'ಬ್ಲ್ಯಾಕ್ ಬಕ್' ಗಳನ್ನು ಕಾಣಬಹುದಾಗಿದೆ. ಇಲ್ಲಿ ಹೆರಳವಾಗಿರುವ ವರ್ಡಂಟ್ ಅಕಾಸಿಯಾ ಮತ್ತು ಪ್ರೊಸೊಪಿಸ್ ಮರಗಳು ಈ ಧಾಮಕ್ಕೆ ಸವನ್ನಾ ತರಹದ ನೋಟವನ್ನು ಒದಗಿಸುತ್ತದೆ. ಇಲ್ಲಿ ಕೆಲವು ಋತುಮಾನಕ್ಕೆ ತಕ್ಕ ಕೊಳಗಳಿದ್ದು, ಪ್ರಾಣಿಗಳಿಗೆ ಇವೆ ನೀರಿನ ಮೂಲವಾಗಿದೆ.'ಮೋಥಿಯಾ' ಎಂದು ಸ್ಥಳೀಯವಾಗಿ ಕರೆಯಲಾಗುವ ಒಂದು ವಿಶೇಷ ಬಗೆಯ ಹುಲ್ಲಿಗಾಗಿ ಈ ಧಾಮವು ಪ್ರಸಿದ್ಧವಾಗಿದೆ. ಮುತ್ತು ಎಂಬ ಅರ್ಥ ನೀಡುವ 'ಮೋತಿ' ಎಂಬ ಶಬ್ದದಿಂದ ಈ ಹೆಸರು ಬಂದಿದೆ. ಈ ಹುಲ್ಲಿನ ಬೀಜಗಳು ನೋಡಲು ಮುತ್ತುಗಳ ಹಾಗಿದ್ದು ಸಿಹಿಯಾದ ರುಚಿಯನ್ನು ಹೊಂದಿದೆ. ಈ ಬೀಜಗಳು ಧಾಮದ ಪ್ರಾಣಿ ಹಾಗು ಪಕ್ಷಿಗಳಿಗೆ ಆಹಾರವಾಗಿದ್ದು, ಪ್ರವಾಸಿಗರೂ ಕೂಡ ಇದರ ಸ್ವಾದವನ್ನು ಸವಿಯಬಹುದಾಗಿದೆ. ವಲಸೆ ಹೋಗುವ ಒಂದು ಪಕ್ಷಿಯ ವಿಧವಾದ 'ಹ್ಯಾರಿಯರ್ಸ್' ಗಳಿಗೆ, ತಲ್ ಛಾಪರ್ ಧಾಮವು ತಂಗುದಾಣವಾಗಿದೆ. ಸೆಪ್ಟಂಬರ್ ತಿಂಗಳಿನಲ್ಲಿ ಈ ಪಕ್ಷಿಗಳನ್ನು ಇಲ್ಲಿ ನೋಡಬಹುದಾಗಿದೆ. ಇತರೆ ಸಾಮಾನ್ಯವಾಗಿ ಕಾಣಸಿಗುವ ಪಕ್ಷಿಗಳೆಂದರೆ ಇಂಪೇರಿಯಲ್ ಹದ್ದುಗಳು, ಟಾವ್ನಿ ಹದ್ದುಗಳು, ಶಾರ್ಟ್ ಟೋವ್ಡ್ ಹದ್ದುಗಳು, ಗುಬ್ಬಿಗಳು, ಬಾನಾಡಿಗಳು, ಪಾರಿವಾಳಗಳು, ಬ್ಲೂ ಜೇಸ್ ಮತ್ತು ಬ್ಲ್ಯಾಕ್ ಐಬೀಸ್. ಇನ್ನು ಪಕ್ಷಿ ಪ್ರಿಯರು, ಯುರೇಷಿಯಾದಿಂದ ಬರುವ ಡೀಮೊಯ್ ಸೇಲ್ ಕ್ರೇನ್ ಪಕ್ಷಿಗಳನ್ನು ಮಾರ್ಚ್ ತಿಂಗಳಿನಲ್ಲಿ ಕಾಣಬಹುದಾಗಿದೆ. ಸಾಮಾನ್ಯವಾಗಿ ಕಂಡುಬರುವ ಪ್ರಾಣಿಗಳೆಂದರೆ ಮರುಭೂಮಿ ನರಿಗಳು ಮತ್ತು ಬೆಕ್ಕುಗಳು, ಕೌಜುಗ ಹಕ್ಕಿ ಮತ್ತು ಸ್ಯಾಂಡ್ ಗ್ರೌಸ್.


Click it and Unblock the Notifications