ಲಾಡ್ನೂ ನಲ್ಲಿಯ ವಿಶ್ವ ಭಾರತಿ ವಿಶ್ವವಿದ್ಯಾನಿಲಯವು ಪ್ರಸಿದ್ಧ ಆಕರ್ಷಣೀಯ ಸ್ಥಳವಾಗಿದೆ. ಜೈನ ತೇರಾಪಂಥದ ಮುಖ್ಯಸ್ಥರಾಗಿದ್ದ ಆಚಾರ್ಯ ತುಳಸಿಯವರು ಇದನ್ನು 1970 ರಲ್ಲಿ ಸ್ಥಾಪಿಸಿದ್ದಾರೆ. ಮೊದಲಿಗೆ ಇದನ್ನು ಜೈನ ವಿಶ್ವ ಭಾರತಿ ಇನ್ಸ್ಟಿಟ್ಯೂಟ್ ಎಂದು ಕರೆಯಲಾಗುತ್ತಿತ್ತು. ಈ ವಿದ್ಯಾನಿಲಯವು ತನ್ನ ಉಚ್ಛ ಗುಣಮಟ್ಟದ ವಿದ್ಯಾಭ್ಯಾಸ, ಆಧ್ಯಾತ್ಮಿಕತೆ ಮತ್ತು ನೈತಿಕ ಮೌಲ್ಯಗಳಿಂದಾಗಿ ಹೆಚ್ಚು ಪ್ರಸಿದ್ಧಿಯಾಗಿದೆ.