Search
  • Follow NativePlanet
Share
ಮುಖಪುಟ » ಸ್ಥಳಗಳು » ಕುರುಕ್ಷೇತ್ರ » ಆಕರ್ಷಣೆಗಳು » ಸನ್ನಿಹಿತ್ ಸರೋವರ್

ಸನ್ನಿಹಿತ್ ಸರೋವರ್, ಕುರುಕ್ಷೇತ್ರ

1

ಸನ್ನಿಹಿತ್ ಸರೋವರವು ಪವಿತ್ರವಾದ ಸಪ್ತಸರಸ್ವತಿಯರ ಸಂಗಮ ಸ್ಥಾನವೆಂದು ಪರಿಗಣಿಸಲ್ಪಟ್ಟಿದೆ. " ಸನ್ನಿಹಿತ್" ಎಂಬ ಪದವೇ ಸಂಗ್ರಹಿಸು ಎಂಬ ಅರ್ಥವನ್ನು ಸೂಚಿಸುತ್ತದೆ. ಇದರ ಅರ್ಥವೇ ಸೂಚಿಸುವಂತೆ ಈ ಸರೋವರವು ಅಮಾವಸ್ಯೆ ಮತ್ತು ಸೂರ್ಯಗ್ರಹಣಗಳಂದು ಎಲ್ಲಾ ಪವಿತ್ರ ನದಿ ತೀರ್ಥಗಳಿಂದ ನೀರನ್ನು ಪಡೆಯುತ್ತದೆಯಂತೆ. ವಿಶೇಷವಾಗಿ ಸಪ್ತ ಸರಸ್ವತಿಯರ ನೀರನ್ನು ಇದು ಪಡೆಯುತ್ತದೆಯಂತೆ. ಪುರಾಣಗಳ ಪ್ರಕಾರ ಸನ್ನಿಹಿತ ಸರೋವರದಲ್ಲಿ ಅಮಾವಸ್ಯೆ ಅಥವಾ ಸೂರ್ಯಗ್ರಹಣಗಳಂದು ಮಾಡುವ ಸ್ನಾನವು ಅಶ್ವಮೇಧ ಯಾಗ ಮಾಡಿದಾಗ ದೊರೆಯುವ ಫಲವನ್ನು ನಮಗೆ ನೀಡುತ್ತದೆಯಂತೆ.

ಇದರ ಜೊತೆಗೆ ಇಲ್ಲಿ ದಾನ ಧರ್ಮಗಳನ್ನು ಮಾಡುವುದರಿಂದ ಪಿತೃ ದೇವತೆಗಳಿಗೆ ಸದ್ಗತಿಯು ದೊರೆಯುತ್ತದೆಯೆಂಬ ನಂಬಿಕೆ ಇಲ್ಲಿ ಮನೆ ಮಾಡಿದೆ. ಹಾಗಾಗಿ ಇಲ್ಲಿ ಪಿಂಡದಾನವನ್ನು ಮಾಡಲು ಹಲವಾರು ಜನರು ಬರುತ್ತಿರುತ್ತಾರೆ. ಇಲ್ಲಿನ ನಂಬಿಕೆಗಳ ಪ್ರಕಾರ ಈ ಸರೋವರದಲ್ಲಿ ನೆಲೆಸಿರುವ ಮಹಾವಿಷ್ಣುವು ಅವರ ಪಿತೃಗಳಿಗೆ ಸದ್ಗತಿಯನ್ನು ಒದಗಿಸುತ್ತಾನಂತೆ.

ಹನುಮಾನ್, ವಿಷ್ಣು, ಧ್ರುವ್ ಭಾಗತ್, ದುರ್ಗಾ, ಲಕ್ಷ್ಮೀ ನಾರಾಯಣ್ ಮತ್ತು ಇನ್ನಿತರ ದೇವಾಲಯಗಳನ್ನು ಈ ಸರೋವರದ ಇಕ್ಕೆಲಗಳಲ್ಲಿ ನಿರ್ಮಿಸಲಾಗಿದೆ. ಈ ಸರೋವರಕ್ಕೆ ಹಿಂದೂಗಳು ಮತ್ತು ಸಿಖ್ಖರು ಭೇಟಿ ನೀಡುತ್ತಿರುತ್ತಾರೆ. ಇಲ್ಲಿ ಸಿಖ್ ಗುರುಗಳಿಗಾಗಿ ಹಲವಾರು ಗುರುದ್ವಾರಗಳನ್ನು ನಿರ್ಮಿಸಲಾಗಿದೆ.

One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Mar,Tue
Check Out
11 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Mar,Tue
Return On
11 Mar,Wed