Search
  • Follow NativePlanet
Share
ಮುಖಪುಟ » ಸ್ಥಳಗಳು » ಕುರುಕ್ಷೇತ್ರ » ಆಕರ್ಷಣೆಗಳು » ಜ್ಯೋತಿಸರ್

ಜ್ಯೋತಿಸರ್, ಕುರುಕ್ಷೇತ್ರ

1

ಬಹುಶಃ ಹಿಂದೂಗಳ ಅತ್ಯಂತ ಪವಿತ್ರ ಶ್ರದ್ಧಾ ಕೇಂದ್ರವಾಗಿ ಇದನ್ನು ಗುರುತಿಸಬಹುದು. ಜ್ಯೋತಿಸರದಲ್ಲಿಯೇ ಭಗವಾನ್ ಶ್ರೀಕೃಷ್ಣನು ಅರ್ಜುನನಿಗೆ ಭಗವದ್ಗೀತೆಯನ್ನು ಬೋಧಿಸಿದನಂತೆ. ಇದು ಮಹಾಭಾರತ ಯುದ್ಧದ ಆರಂಭ ಸ್ಥಳವಂತೆ, ಇದೇ ಸ್ಥಳದಲ್ಲಿ ಯುದ್ಧವನ್ನು ಆರಂಭಿಸುವ ರಣಭೇರಿಗಳನ್ನು ಬಾರಿಸಲಾಗಿತ್ತಂತೆ.

ನಂಬಿಕೆಗಳ ಪ್ರಕಾರ ಈ ಸ್ಥಳದ ಮಹಿಮೆಯನ್ನು ಮೊದಲು ಅರಿತು, ಅದನ್ನು ಲೋಕಕ್ಕೆ ಸಾರಿದವರು ಶ್ರೀ ಆದಿ ಶಂಕರಾಚಾರ್ಯರು. ಇವರು ತಮ್ಮ ಹಿಮಾಲಯದ ಯಾತ್ರೆಯ ಸಮಯದಲ್ಲಿ ಅಂದರೆ 9ನೇ ಶತಮಾನದ ಸಂದರ್ಭದಲ್ಲಿ ಇದನ್ನು ತಿಳಿಸಿದರು. ಕಾಶ್ಮೀರಿ ರಾಜನು ಇಲ್ಲಿ 1850ರಲ್ಲಿ ಒಂದು ಈಶ್ವರನ ದೇವಾಲಯವನ್ನು ನಿರ್ಮಿಸಿದನು.

ಇಲ್ಲಿ ಒಂದು ಆಲದಮರವಿದ್ದು, ಅದು ಗೀತೋಪದೇಶದ ಜೀವಂತ ಸಾಕ್ಷಿಯಾಗಿ ಇಂದಿಗು ನಿಂತಿದೆ. ಇದರ ಸುತ್ತ ಒಂದು ಕಲ್ಲಿನ ವೇದಿಕೆಯನ್ನು ನಿರ್ಮಿಸಲಾಗಿದೆ. ಇದನ್ನು ದರ್ಬಂಗದ ರಾಜರು ನಿರ್ಮಿಸಿದರಂತೆ.ಪೂರ್ವಾಭಿಮುಖವಾಗಿ ನಿಂತಿರುವ ರಥದ ಕೆಳಗೆ ಶ್ರೀಕೃಷ್ಣನು ತನ್ನ ಮುಂದೆ ಕೈಜೋಡಿಸಿಕೊಂಡು ಕೇಳುತ್ತಿರುವ ಅರ್ಜುನನಿಗೆ ಗೀತೆಯನ್ನು ಬೋಧಿಸುತ್ತಿರುವ ಶಿಲ್ಪವನ್ನು ನಾವಿಲ್ಲಿ ನೋಡಬಹುದು. ಇದನ್ನು ಜ್ಯೋತಿಸರದಲ್ಲಿ 1967ರಲ್ಲಿ ನಿರ್ಮಿಸಲಾಯಿತು. ಇದರ ನಿರ್ಮಾತೃಗಳು ಕಂಚಿ ಕಾಮ ಕೋಟಿ ಪೀಠದ ಶಂಕರಾಚಾರ್ಯರು.

ಜ್ಯೋತಿಸರದಲ್ಲಿ ಪ್ರತಿದಿನ ಸಂಜೆ ಹಿಂದಿ ಮತ್ತು ಇಂಗ್ಲೀಷಿನಲ್ಲಿ ಒಂದು ಧ್ವನಿ ಮತ್ತು ಬೆಳಕಿನ ಪ್ರದರ್ಶನವನ್ನು ನಾವು ಕಾಣಬಹುದು.

One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Mar,Tue
Check Out
11 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Mar,Tue
Return On
11 Mar,Wed