ಕುರುಕ್ಷೇತ್ರವು ಮಹಾಭಾರತ ಮತ್ತು ಅದಕ್ಕೂ ಹಿಂದಿನ ಕಾಲದ ಹಲವಾರು ಹಿಂದೂ ಧಾರ್ಮಿಕ ಯಾತ್ರಾಸ್ಥಳಗಳನ್ನು ಹೊಂದಿದೆ. ಆದಾಗಿಯೂ ಮುಂದೆ ಇಲ್ಲಿಗೆ ವಿವಿಧ ಧರ್ಮಗಳ ಮತ್ತು ಮತಗಳ ಹಲವಾರು ವಿದ್ವಾಂಸರು, ಗುರುಗಳು ಮತ್ತು ಸಂತರು ಭೇಟಿ ನೀಡಿದರು. ಭಗವಾನ್ ಬುದ್ಧನು ಇಲ್ಲಿಗೆ ಭೇಟಿ ನೀಡಿದ್ದನು ಎಂದು ತಿಳಿದುಬಂದಿದೆ. ಹಾಗಾಗಿಯೇ ಇಲ್ಲಿ ಹಲವಾರು ಬೌದ್ಧ ಸ್ಮಾರಕಗಳು ಕಂಡು ಬರುತ್ತವೆ. ಕೆಲವೊಂದು ಸ್ಮಾರಕಗಳು ಕಾಲಾನುಕ್ರಮದಲ್ಲಿ ನಿರ್ಮಾಣಗೊಳ್ಳಲ್ಪಟ್ಟವು. ಹಾಗಾಗಿಯೇ ಬೌದ್ಧ ಧರ್ಮೀಯರಿಗು ಸಹ ಕುರುಕ್ಷೇತ್ರವು ಪವಿತ್ರ ಸ್ಥಳವಾಗಿದೆ.


Click it and Unblock the Notifications