Search
  • Follow NativePlanet
Share
ಮುಖಪುಟ » ಸ್ಥಳಗಳು » ಕುರುಕ್ಷೇತ್ರ » ಆಕರ್ಷಣೆಗಳು » ಬಿರ್ಲಾ ಮಂದಿರ್

ಬಿರ್ಲಾ ಮಂದಿರ್, ಕುರುಕ್ಷೇತ್ರ

1

ಬಿರ್ಲಾ ಮಂದಿರವು ಹೆಸರೆ ಸೂಚಿಸುವಂತೆ ಕೀರ್ತಿಶೇಷರಾದ ಜುಗಲ್ ಬಿರ್ಲಾರವರು 1952ರಲ್ಲಿ ನಿರ್ಮಿಸಿದ ಮಂದಿರವಾಗಿದೆ. ಈ ಮಂದಿರವಾದ ನಂತರ ಈ ಸ್ಥಳವು ಪ್ರವಾಸಿ ತಾಣವಾಗಿ ಪ್ರಚಾರಕ್ಕೆ ಬಂದಿತು. ಬ್ರಹ್ಮ ಸರೋವರಕ್ಕೆ ಹತ್ತಿರದಲಿ ಕುರುಕ್ಷೇತ್ರ- ಥಾನೇಶ್ವರ್ ರಸ್ತೆಯಲ್ಲಿರುವ ಹಳೆಯ ನಗರದಲ್ಲಿ ಇದನ್ನು ನಿರ್ಮಿಸಲಾಗಿದೆ. ರೈಲ್ವೇ ನಿಲ್ದಾಣದಿಂದ ಕೇವಲ 2 1/2 ಕಿ,ಮೀ ದೂರದಲ್ಲಿ ಇದು ನೆಲೆಗೊಂಡಿದೆ.

ಬಿರ್ಲಾ ಮಂದಿರವನ್ನು ಪರಿಶುದ್ಧವಾದ ಅಮೃತಶಿಲೆಯಿಂದ ನಿರ್ಮಿಸಲಾಗಿದೆ. ಇದರ ಹಿಂದೆ ಹಚ್ಚ ಹಸಿರಿನಿಂದ ಕೂಡಿದ ಉದ್ಯಾನವನವನ್ನು ನಿರ್ಮಿಸಲಾಗಿದೆ. ಇಲ್ಲಿನ ಪ್ರಮುಖ ದೇವಾಲಯ ಸಂಕೀರ್ಣದಲ್ಲಿ ಗೀತಾಭೋಧನೆ ಮಾಡುತ್ತಿರುವ ಶ್ರೀಕೃಷ್ಣನ ಮೂರ್ತಿಯನ್ನು ಕೆತ್ತಲಾಗಿದೆ. ಹಿನ್ನಲೆಯಲ್ಲಿ ರಥವನ್ನು ಮತ್ತು ಮುನ್ನಲೆಯಲ್ಲಿ ಕೈ ಮುಗಿದು ವಿನಮ್ರನಾಗಿ ಕೇಳುತ್ತಿರುವ ಅರ್ಜುನನನ್ನು ಹೊಂದಿರುವ ಶ್ರೀ ಕೃಷ್ಣನ ಮೂರ್ತಿಯು ತನ್ನ ಭವ್ಯತೆಯಿಂದಾಗಿ ಎಲ್ಲರನ್ನು ಗಮನ ಸೆಳೆಯುತ್ತದೆ.

ಇದು ಥಾನೇಶ್ವರದಲ್ಲಿರುವ ವಿಶ್ವ ವಿಖ್ಯಾತ ದೇವಾಲಯವನ್ನೆ ಹೋಲುತ್ತದೆ. ಶ್ರೀ ಕೃಷ್ಣನು ಅರ್ಜುನನಿಗೆ ಗೀತೋಪದೇಶವನ್ನು ಮಾಡಿದ ಸ್ಥಳದಲ್ಲಿಯೇ ಇದನ್ನು ನಿರ್ಮಿಸಿರುವುದು ವಿಶೇಷ. ಈ ದೇವಾಲಯವು ಗುರು ನಾನಕ್, ಗುರು ಗೋಬಿಂದ್ ಸಿಂಗ್, ಗುರು ತೇಗ್ ಬಹದ್ದೂರ್, ಸಂತ ರವಿದಾಸ್, ಶ್ರೀ ಕೃಷ್ಣ, ಹನುಮಾನ್, ರಾಮ ಮತ್ತು ಇನ್ನಿತರ ದೇವರುಗಳ ಮೂರ್ತಿಯನ್ನು ಮತ್ತು ಅವರ ಬೋಧನೆಗಳನ್ನು ಹೊಂದಿರುವ ಫಲಕಗಳನ್ನು ಹೊಂದಿದೆ.

One Way
Return
From (Departure City)
To (Destination City)
Depart On
11 Jul,Sat
Return On
12 Jul,Sun
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
11 Jul,Sat
Check Out
12 Jul,Sun
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
11 Jul,Sat
Return On
12 Jul,Sun