ವೈಕೊಮ್ ಮಹಾದೇವ ದೇವಲಯವು ಕೇರಳದ ಅತ್ಯಂತ ಹಳೆಯ ಮತ್ತು ಐತಿಹಾಸಿಕ ದೇವಾಲಯವೆನ್ನುವ ಕಾರಣಕ್ಕೆ ದೇಶದ ಉದ್ದಗಲಕ್ಕು ತನ್ನ ಗಮನವನ್ನು ಸೆಳೆದಿದೆ.ಈ ದೇವಾಲಯವು ವೆಂಬನಾಡ್ ಕೆರೆಯ ಪಕ್ಕದಲ್ಲಿ ನೆಲೆಸಿರುವ ವೈಕೊಮ್ ಎಂಬ ಪಟ್ಟಣದಲ್ಲಿ ನೆಲೆಗೊಂಡಿದೆ. ಈ ದೇವಾಲಯವು ಶೈವರು ಮತ್ತು ವೈಷ್ಣವರಿಬ್ಬರು ಪೂಜಿಸುವ ಕೆಲವೆ ಕೆಲವು ಶಿವನ ದೇವಾಲಯಗಳಲ್ಲಿ ಒಂದು ಎಂಬ ಖ್ಯಾತಿಯನ್ನು ಪಡೆದಿದೆ.
ಈ ದೇವಾಲಯದ ಹೆಸರನ್ನು ಕೇರಳದ ಆಧುನಿಕ ಇತಿಹಾಸದಲ್ಲಿ ಸುವರ್ಣಾಕ್ಷರಗಳಲ್ಲಿ ಬರೆದಿಡಲಾಗಿದೆ. ಏಕೆಂದರೆ 1924ರಲ್ಲಿ ಇಲ್ಲಿ ವೈಕೊಮ್ ಸತ್ಯಾಗ್ರಹಮ್ ( ಅಸ್ಪೃಶ್ಯತೆಯ ವಿರುದ್ಧದ ಹೋರಾಟ) ಎಂಬ ಮಹತ್ವದ ಹೋರಾಟ ನಡೆಯಿತು. ಈ ದೇವಾಲಯದ ಮುಖ್ಯ ದೈವ – ಶಿವ. ಈ ದೇವಾಲಯವು ಸುಮಾರು ಎಂಟು ಎಕರೆಗಳಷ್ಟು ವ್ಯಾಪಿಸಿದೆ.
ಈ ದೇವಾಲಯದಲ್ಲಿ ನಡೆಯುವ ಪ್ರಮುಖ ಉತ್ಸವವೆಂದರೆ ವೈಕೊಮ್ ಅಷ್ಟಮಿ. ಇದು ನವೆಂಬರ್- ಡಿಸೆಂಬರ್ ತಿಂಗಳುಗಳಲ್ಲಿ ಬರುತ್ತದೆ. ದೇವಾಲಯದ ಆವರಣದಲ್ಲಿ ಕಲ್ಲಿನಿಂದ ಕೆತ್ತಲಾದ ನಂದಿ ಮತ್ತು ಗಣಪತಿಯ ಮೂರ್ತಿಗಳಿವೆ. ವೈಕೊಮ್ ಮಹಾದೇವ ದೇವಾಲಯವು ಕುಮರಕೊಮಿನಿಂದ 22 ಕಿ.ಮೀ ದೂರದಲ್ಲಿ ಮತ್ತು ಕೊಟ್ಟಾಯಂ ನಗರದಿಂದ 32ಕಿ.ಮೀ ದೂರದಲ್ಲಿ ನೆಲೆಸಿದೆ. ಇಲ್ಲಿಗೆ ರಸ್ತೆ ಮಾರ್ಗವಾಗಿ ಸುಲಭವಾಗಿ ತಲುಪಬಹುದು.


Click it and Unblock the Notifications