Search
  • Follow NativePlanet
Share
ಮುಖಪುಟ » ಸ್ಥಳಗಳು » ಕುಮರಕೊಮ್ » ಆಕರ್ಷಣೆಗಳು » ಸೆಂಟ್ ಮೇರೀಸ್ ಚರ್ಚ್, ಅತಿರಾಂಪುಳ

ಸೆಂಟ್ ಮೇರೀಸ್ ಚರ್ಚ್, ಅತಿರಾಂಪುಳ, ಕುಮರಕೊಮ್

1

ಅತಿರಾಂಪುಳದ ಸೆಂಟ್ ಮೇರೀಸ್ ಚರ್ಚ್ ಕೇರಳದ ಅತ್ಯಂತ ಪ್ರಾಚೀನ ಮತ್ತು ಪ್ರಸಿದ್ಧ ಚರ್ಚುಗಳಲ್ಲಿ ಒಂದಾಗಿದೆ. ಇದೊಂದು ಅತಿ ಹೆಚ್ಚು ಸಂಖ್ಯೆಯಲ್ಲಿ ಪ್ರವಾಸಿಗರನ್ನು ಮತ್ತು ಭಕ್ತಾಧಿಗಳನ್ನು ಆಕರ್ಷಿಸುತ್ತಿರುವ ಧಾರ್ಮಿಕ ಯಾತ್ರಾಸ್ಥಳವಾಗಿದೆ. ಈ ಚರ್ಚಿನ ನಿರ್ಮಾಣದ ಕಾಲವು ನಮ್ಮನ್ನು  ಕ್ರಿ.ಶ 835ರಷ್ಟು ಹಿಂದಕ್ಕೆ ಕೊಂಡೊಯ್ಯುತ್ತದೆ. ಈ ಚರ್ಚನ್ನು ಕನ್ಯೆ ಮೇರಿಗಾಗಿ ನಿರ್ಮಿಸಲಾಗಿದೆ. ಅಲ್ಲದೆ ಇಲ್ಲಿ ಸೆಂಟ್, ಸೆಬಾಸ್ಟಿಯನ್ನರ ಪ್ರಾಚೀನ ವಿಗ್ರಹವನ್ನಿಡಲಾಗಿದೆ. ಇದು ಇಲ್ಲಿಗೆ ಆಗಮಿಸುವ ಭಕ್ತಾಧಿಗಳ ಮತ್ತು ಪ್ರವಾಸಿಗರ ಪ್ರಧಾನ ಆಕರ್ಷಣೆಯಾಗಿದೆ. ಇತಿಹಾಸದ ಪ್ರಕಾರ ಈ ವಿಗ್ರಹವನ್ನು 1687ರಲ್ಲಿ ಪೋರ್ಚುಗೀಸ್ ನಾವಿಕ ಲಿಯೋನಾರ್ಡ್ ಡಿ’ಕ್ರುಝ್ ತಂದನಂತೆ.

ಈ ಚರ್ಚ್ ಕೊಟ್ಟಾಯಂನಿಂದ 10 ಕಿ.ಮೀ ದೂರದಲ್ಲಿ ನೆಲೆಸಿದೆ. ರಸ್ತೆ ಮಾರ್ಗವಾಗಿ ಈ ಚರ್ಚಿಗೆ ಸುಲಭವಾಗಿ ತಲುಪಬಹುದು. 19ನೇ ಶತಮಾನಕ್ಕು ಮೊದಲು ಈ ಚರ್ಚ್ ಈ ಪ್ರಾಂತ್ಯದ ಸಂಸ್ಕೃತಿ ಮತ್ತು ಧಾರ್ಮಿಕ ಬೆಳವಣಿಗೆಗೆ ತನ್ನದೆ ಆದ ಕೊಡುಗೆಯನ್ನು ನೀಡಿತ್ತು ಎಂದು ಭಾವಿಸಲಾಗಿದೆ.

ಚರ್ಚಿನ ಉತ್ಸವವನ್ನು ಅತ್ಯಂತ ಶ್ರದ್ಧಾಭಕ್ತಿಗಳಿಂದ ನೆರವೇರಿಸಲಾಗುತ್ತದೆ. ಸಹಸ್ರಾರು ಜನ ಈ ಚರ್ಚಿಗೆ ಇದರ ಧಾರ್ಮಿಕ ಮತ್ತು ಐತಿಹಾಸಿಕ ಮಹತ್ವವನ್ನು ತಿಳಿಯುವ ಸಲುವಾಗಿ ಆಗಮಿಸುತ್ತಿರುತ್ತಾರೆ.

One Way
Return
From (Departure City)
To (Destination City)
Depart On
11 Mar,Wed
Return On
12 Mar,Thu
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
11 Mar,Wed
Check Out
12 Mar,Thu
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
11 Mar,Wed
Return On
12 Mar,Thu