Search
  • Follow NativePlanet
Share
ಮುಖಪುಟ » ಸ್ಥಳಗಳು » ಕುಮರಕೊಮ್ » ಆಕರ್ಷಣೆಗಳು » ಜಾಮಾ ಮಸೀದಿ

ಜಾಮಾ ಮಸೀದಿ, ಕುಮರಕೊಮ್

1

ಕುಮರಕೊಮಿನ ಜಾಮಾ ಮಸೀದಿಯು ತಳತಂಗಡಿ ಮಸೀದಿ ಎಂದೆ ಪ್ರಸಿದ್ಧಿಯಾಗಿದೆ. ಇದು ಕುಮರಕೊಮ್ ಪಟ್ಟಣದಿಂದ 12ಕಿ.ಮೀ ದೂರದಲ್ಲಿದ್ದು, ಈ ಪ್ರಾಂತ್ಯದ ಅತ್ಯಂತ ಪ್ರಸಿದ್ಧ ಧಾರ್ಮಿಕ ಯಾತ್ರಾ ಸ್ಥಳವಾಗಿದೆ. ಮೀನಚಿಲ್ ನದಿಯ ದಂಡೆಯಲ್ಲಿ ನೆಲೆಸಿರುವ ಈ ಮಸೀದಿಗೆ ವರ್ಷಪೂರ್ತಿ ಭಕ್ತಾಧಿಗಳು ಮತ್ತು ಪ್ರವಾಸಿಗರು ಭೇಟಿಕೊಡುತ್ತ ಇರುತ್ತಾರೆ.

ಈ ಮಸೀದಿಯ ಇತಿಹಾಸವು ಸಾವಿರಾರು ವರ್ಷಗಳಷ್ಟು ಹಿಂದಕ್ಕೆ ಕರೆದೊಯ್ಯುತ್ತದೆ. ಅಲ್ಲದೆ ಈ ಮಸೀದಿಯು ದೇಶದ ಅತ್ಯಂತ ಪುರಾತನ ಮಸೀದಿ ಎಂದು ಪರಿಗಣಿಸಲಾಗಿದೆ. ಜಾಮಾ ಮಸೀದಿಯು ತನ್ನ ಸಾಂಪ್ರದಾಯಿಕವಾದ ವಾಸ್ತುಶೈಲಿಯಿಂದಾಗಿ ಗಮನಸೆಳೆಯುತ್ತಿದೆ. ಗತಕಾಲದ ಭವ್ಯ ಸಂಸ್ಕೃತಿಯನ್ನು ಬಿಂಬಿಸುವಂತೆ ಮತ್ತು ಸಾಕ್ಷೀಕರಿಸುವಂತಿರುವ ಇಲ್ಲಿನ ಪದಗಳ ಕೆತ್ತನೆಯು  ನೋಡುಗರ ಮನಸೂರೆಗೊಳ್ಳುತ್ತವೆ.

ಈ ಮಸೀದಿಯು ತನ್ನ ಒಳಗೆ ಒಂದು ಸಭಾಂಗಣವನ್ನು(ನಲುಕೆಟ್ಟು ಎಂದು ಸಹ ಕರೆಯಲಾಗುತ್ತದೆ) ಮತ್ತು ಸ್ನಾನದ ಪ್ರದೇಶವನ್ನು ಹೊಂದಿದೆ. ಈ ಮಸೀದಿಯನ್ನು ಕೇರಳಗೆ ಇಸ್ಲಾಂ ಧರ್ಮವನ್ನು ಪರಿಚಯಿಸಿದ ಮಲಿಕ್ ದಿನಾರ್ ರವರ ಮಗನಾದ ಹಬೀಬ್ ದಿನಾರ್ ನಿರ್ಮಿಸಿದನು. ಈ ಮಸೀದಿಯನ್ನು ಸರ್ಕಾರವು ಸಂರಕ್ಷಿತ ಸ್ಮಾರಕವೆಂದು ಘೋಷಿಸಿದೆ.

One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Mar,Tue
Check Out
11 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Mar,Tue
Return On
11 Mar,Wed