Search
  • Follow NativePlanet
Share
ಮುಖಪುಟ » ಸ್ಥಳಗಳು » ಕುಲ್ಲು » ಆಕರ್ಷಣೆಗಳು » ದಿ ಗ್ರೇಟ್ ಹಿಮಾಲಯನ್ ಪಾರ್ಕ್

ದಿ ಗ್ರೇಟ್ ಹಿಮಾಲಯನ್ ಪಾರ್ಕ್, ಕುಲ್ಲು

1

ದಿ ಗ್ರೇಟ್ ಹಿಮಾಲಯನ್ ಪಾರ್ಕ್ ಅಥವಾ ಜವಾಹರ್ ಲಾಲ್ ನೆಹರು ಗ್ರೇಟ್ ಹಿಮಾಲಯನ್ ಪಾರ್ಕ್, ಕುಲ್ಲುವಿನ ಅತ್ಯಂತ ಪ್ರಮುಖ ಪ್ರವಾಸಿ ಆಕರ್ಷಣೆಯಾಗಿದೆ. 50 ಚ.ಕಿ.ಮೀ ವೀಸ್ತೀರ್ಣದಲ್ಲಿ ವ್ಯಾಪಿಸಿರುವ ಈ ರಾಷ್ಟ್ರೀಯ ಉದ್ಯಾನವನವು ವಿಫುಲವಾದ ಸಸ್ಯ ಮತ್ತು ಪ್ರಾಣಿ ಪ್ರಭೇದಗಳಿಗೆ ಆಶ್ರಯವನ್ನು ಒದಗಿಸಿದೆ. ಇಲ್ಲಿ 30 ಬಗೆಯ ಸಸ್ತನಿಗಳು ಮತ್ತು 300 ಕ್ಕೂ ಅಧಿಕ ಬಗೆಯ ಪಕ್ಷಿ ಪ್ರಭೇದಗಳನ್ನು ನಾವು ಕಾಣಬಹುದು. ಈ ಉದ್ಯಾನವನದಲ್ಲಿ ನಾವು ಮುಖ್ಯವಾಗಿ ಪಾಶ್ಚಿಮಾತ್ಯದ ಟ್ರಾಗೊಪನ್ಸ್ ಎಂಬ ಅಪರೂಪದಲ್ಲಿ ಅಪರೂಪವಾದ ಪಕ್ಷಿಯನ್ನು ನಾವು ಕಾಣಬಹುದು.

ಈ ಉದ್ಯಾನವನದ ಜೊತೆಗೆ ಕನವರ್ ವನ್ಯಜೀವಿಧಾಮ, ರುಪಿ ಬಾಬಾ ವನ್ಯಜೀವಿಧಾಮ ಮತ್ತು ಪಿನ್ ಕಣಿವೆ ರಾಷ್ಟ್ರೀಯ ಉದ್ಯಾನವನಗಳೆಲ್ಲವು ಸೇರಿ ಪಶ್ಚಿಮ ಹಿಮಾಲಯವನ್ನು ಹಾಗು ಉತ್ತರ ಭಾರತವನ್ನು ಅತಿದೊಡ್ಡ ಜೈವಿಕ ವಲಯವನ್ನಾಗಿ ರೂಪಿಸಿದೆ. ಕಂದು ಕರಡಿಗಳು, ಕಪ್ಪು ಕರಡಿಗಳು, ಕಸ್ತೂರಿ ಮೃಗ, ಅಪರೂಪದ ಹಿಮ ಚಿರತೆಗಳು ಮತ್ತು ಹಿಮಾಲಯನ್ ಥಾರ್ ಗಳನ್ನು ನಾವು ಇಲ್ಲಿ ಕಾಣಬಹುದಾಗಿದೆ.

ಈ ಉದ್ಯಾನವನದಲ್ಲಿ ಹಿಮಚ್ಛಾಧಿತ ಕಾಡುಗಳು, ಓಕ್ ಕಾಡುಗಳು, ಅಲ್ಪೈನ್ ಸ್ಕ್ರಬ್, ಉಪ ಅಲ್ಪೈನ್ ಸಮುದಾಯ ಮತ್ತು ಅಲ್ಪೈನ್ ಹುಲ್ಲುಗಾವಲುಗಳ ಮಾದರಿಯನ್ನು ನಾವು ಕಾಣಬಹುದು. ಬರ್ಬೆರಿಸ್, ಇಂಡಿಗೊಫೆರ, ಸರ್ಕೊಕೊವ ಮತ್ತು ವಿಬುರ್ನಮ್ ಮುಂತಾದ ಕಾಡುಗಳ ಮಾದರಿಯನ್ನು ನಾವು ಕಾಣಬಹುದು. ಈ ಉದ್ಯಾನವನವು ಹಲವಾರು ಗಿಡಮೂಲಿಕೆಗಳಿಗೆ ಹೆಸರುವಾಸಿಯಾಗಿದೆ. ಅವುಗಳನ್ನು ಇಲ್ಲಿ ಸುಗಂಧ ಧ್ರವ್ಯಕ್ಕಾಗಿ ಮತ್ತು ಔಷಧೀಯ ಗುಣಗಳಿಗಾಗಿ ಬಳಸಲಾಗುತ್ತದೆ.

One Way
Return
From (Departure City)
To (Destination City)
Depart On
24 Jul,Fri
Return On
25 Jul,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
24 Jul,Fri
Check Out
25 Jul,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
24 Jul,Fri
Return On
25 Jul,Sat