ಪ್ಯಾರಾಗ್ಲೈಡಿಂಗ್ ಚಟುವಟಿಕೆಗಾಗಿ ಕುಲ್ಲು ಇಡೀ ದೇಶದಲ್ಲಿಯೇ ಖ್ಯಾತಿಯನ್ನು ಪಡೆದಿದೆ. ಈ ಪ್ರಾಂತ್ಯವು ಭಾರತದಲ್ಲಿ ಪ್ಯಾರಾ ಗ್ಲೈಡಿಂಗ್‍ನ ಮೋಜನ್ನು ಸವಿಯಲು ಇರುವ ಅತ್ಯಂತ ಪ್ರಶಸ್ತ ಸ್ಥಳವೆಂದು ಪರಿಗಣಿಸಲ್ಪಟ್ಟಿದೆ. ಬೀರ್, ಸೋಲಂಗ್ ಮತ್ತು ಮಹಾದೇವ್ ಸ್ಥಳಗಳ ಜೊತೆಗೆ ಕುಲ್ಲುವು ವೈಮಾನಿಕ ಕ್ರೀಡಾಸಕ್ತರು ಜಿಗಿಯಲು ಬಳಸುವ ಪ್ರಶಸ್ತವಾದ ಸ್ಥಳಗಳನ್ನು ಒದಗಿಸುತ್ತದೆ. ಫೆಬ್ರವರಿ ಮತ್ತು ಜೂನ್ ಹಾಗು ಸೆಪ್ಟೆಂಬರ್ ಮತ್ತು ನವೆಂಬರ್ ತಿಂಗಳುಗಳು ಪ್ಯಾರಾಗ್ಲೈಡಿಂಗ್ ಮಾಡಲು ಅನುಕೂಲಕರವಾದ ತಿಂಗಳುಗಳಾಗಿವೆ. ಪ್ರವಾಸಿಗರು ಈ ಕುರಿತಾಗಿ ಮನಾಲಿಯಲ್ಲಿರುವ ಹಿಮಾಚಲ್ ಪ್ರದೇಶ್ ಮೌಂಟೇನಿಯರಿಂಗ್ ಇನ್ಸ್ಟಿಟ್ಯೂಟ್ ಅಂಡ್ ಅಲ್ಲೈಡ್ ಸ್ಪೋರ್ಟ್ಸ್ ನಿಂದ ಮಾಹಿತಿ ಪಡೆದು ಬರುವುದು ಉತ್ತಮ.


Click it and Unblock the Notifications