ಕುದುರೆಮುಖಕ್ಕೆ ಪ್ರವಾಸ ಕೈಗೊಳ್ಳುವ ಪ್ರವಾಸಿಗರು ಕುದುರೆಮುಖ ಶೃಂಗಕ್ಕೂ ಭೇಟಿ ಕೊಡಬೇಕು. ಇದು ಸಮುದ್ರ ಮಟ್ಟದಿಂದ ಸುಮಾರು 1894 ಮೀಟರು ಎತ್ತರದ ಪ್ರದೇಶದಲ್ಲಿದೆ. ಅರಣ್ಯ ಪ್ರದೇಶದಲ್ಲಿ ಚಾರಣ ಮಾಡುವವರಿಗೆ ಇದು ಉತ್ತಮವಾದ ತಾಣ. ಈ ಪ್ರದೇಶವನ್ನು ಭೇಟಿ ಮಾಡಿದಾಗ, ವಿಶಾಲವಾದ ಗುಡ್ಡಗಳು ಮತ್ತು ಅವು ಒಂದಕ್ಕೊಂದು ಸಂಪರ್ಕವನ್ನು ಹೊಂದಿರುವುದು ಅರಿವಾಗುತ್ತದೆ. ಕುದುರೆಮುಖ ಶೃಂಗವು ಸುಂದರವಾದ ಮತ್ತು ನೆನಪಿಡುವಂತಹ ಅರೇಬಿಯನ್ ಸಮುದ್ರದ ದೃಶ್ಯವನ್ನು ಕಟ್ಟಿಕೊಡುತ್ತದೆ. ಇದು ವಿವಿಧ ಜಾತಿಯ ಮರಗಿಡಗಳು ಮತ್ತು ಹೂವುಗಳಿಗೆ ಮನೆಯಾಗಿದೆ. ಕುದುರೆಮುಖ ಶೃಂಗದಲ್ಲಿ ಪ್ರವಾಸಿಗರು ಹುಲಿ ಬಾಲದ ಅಳಿಲನ್ನು ಎಲ್ಲಿಬೇಕೆಂದಲ್ಲಿ ನೋಡಬಹುದು.ಕುದುರೆಮುಖ ಶೃಂಗಕ್ಕೆ ಚಾರಣ ಕೈಗೊಳ್ಳುವ ಪ್ರವಾಸಿಗರಿಗೆ ಸೂಕ್ತ ಎಲ್ಲಾ ಸೌಲಭ್ಯ ಲಭ್ಯವಿದೆ. ಉಳಿದುಕೊಳ್ಳುವ ವ್ಯವಸ್ಥೆ ಬಗ್ಗೆ ಪ್ರವಾಸಿಗರು ಚಿಂತೆ ಮಾಡುವ ಅಗತ್ಯವಿಲ್ಲ. ಯಾಕೆಂದರೆ ಕುದುರೆಮುಖ ಶೃಂಗದ ಸಮೀಪದಲ್ಲಿ ಅರಣ್ಯ ಇಲಾಖೆ ಲಾಡ್ಜ್‌ಗಳು ಮತ್ತು ಗೆಸ್ಟ್ ಹೌಸ್‌ಗಳು ಲಭ್ಯವಿದೆ. ಈ ಪ್ರದೇಶವನ್ನು ತಲುಪಿದಾಗ, ಕಳಸ ಪಟ್ಟಣಕ್ಕೆ ಸ್ಥಳೀಯ ಸರ್ಕಾರಿ ಮತ್ತು ಖಾಸಗಿ ಬಸ್‌ಗಳು ಲಭ್ಯವಿದೆ.


Click it and Unblock the Notifications