Search
  • Follow NativePlanet
Share
ಮುಖಪುಟ » ಸ್ಥಳಗಳು » ಕುದುರೆಮುಖ » ಹವಾಮಾನ

ಕುದುರೆಮುಖ ಹವಾಮಾನ

ಅಕ್ಟೋಬರ್ ಮತ್ತು ಫೆಬ್ರವರಿ ಮಧ್ಯದ ಸಮಯವು ಕುದುರೆಮುಖಕ್ಕೆ ಭೇಟಿ ಮಾಡುವುದು ಹೆಚ್ಚು ಸೂಕ್ತ ಎಂದು ಭಾವಿಸಲಾಗಿದೆ. ಮಳೆಗಾಲ ಮತ್ತು ಬೇಸಿಗೆಕಾಲವನ್ನು ಸಾಮಾನ್ಯವಾಗಿ ಪ್ರವಾಸಿಗರಿಗೆ ಶಿಫಾರಸು ಮಾಡಲಾಗುವುದಿಲ್ಲ.

ಬೇಸಿಗೆಗಾಲ

(ಮಾರ್ಚ್‌ನಿಂದ ಮೇ): ಬೇಸಿಗೆಯಲ್ಲಿ ಕುದುರೆಮುಖ ವಾತಾವರಣವು ಸ್ವಲ್ಪ ಉಷ್ಣವಾಗಿರುತ್ತದೆ. ಹಗಲಿನಲ್ಲಿ 35°C ಉಷ್ಣಾಂಶವಿರುತ್ತಿದ್ದು, ರಾತ್ರಿಯಲ್ಲಿ ಉಷ್ಣಾಂಶವು 32°Cಗೆ ಇಳಿಯುತ್ತದೆ.

ಮಳೆಗಾಲ

(ಜೂನ್‌ನಿಂದ ಸಪ್ಟೆಂಬರ್): ಕುದುರೆಮುಖದಲ್ಲಿ ಮಳೆಗಾಲದ ಸಮಯದಲ್ಲಿ ಅತಿಯಾಗಿ ಮಳೆಯಾಗುತ್ತದೆ. ಈ ಸಂದರ್ಭದಲ್ಲಿ ಪ್ರವಾಸಿಗರ ಬಾಹ್ಯ ಚಟುವಟಿಕೆಗಳಾದ ಚಾರಣ, ಮತ್ತು ನಡೆದಾಡುವುದು ಸಾಧ್ಯವಿಲ್ಲ.

ಚಳಿಗಾಲ

(ನವೆಂಬರಿನಿಂದ ಫೆಬ್ರುವರಿ): ಚಳಿಗಾಲದಲ್ಲಿ ಕುದುರೆಮುಖದ ವಾತಾವರಣವು ಶಾಂತವಾಗಿರುತ್ತದೆ. ಚಳಿಗಾಲದಲ್ಲಿ ಇಲ್ಲಿನ ವಾತಾವರಣವು 17°C ಮತ್ತು 20°C ಮಧ್ಯೆ ಏರುಪೇರಾಗುತ್ತಿರುತ್ತದೆ. ಆದರೂ ಕೂಡಾ ಉಷ್ಣಾಂಶವು ಕೆಲವು ಬಾರಿ 10°C ತನಕವೂ ಕುಸಿಯಬಹುದು.