Search
  • Follow NativePlanet
Share
ಮುಖಪುಟ » ಸ್ಥಳಗಳು » ಕೃಷ್ಣಗಿರಿ » ಆಕರ್ಷಣೆಗಳು » ರಾಯಕೋಟ

ರಾಯಕೋಟ, ಕೃಷ್ಣಗಿರಿ

3

ರಾಯಕೋಟ ಅಥವಾ ರಾಯಕೋಟೈ ಎನ್ನುವುದು ಒಂದು ಪಟ್ಟಣವಾಗಿದ್ದು, ಭಾರತ ಪ್ರಾಚ್ಯ ಸರ್ವೇಕ್ಷಣ ವಿಭಾಗದ ಒಂದು ಸಂರಕ್ಷಿತ ಸ್ಮಾರಕವಾಗಿದೆ. ರಾಯಕೋಟೈ ಬೆಟ್ಟವು ಭೌಗೋಳಿಕವಾಗಿ ಪಾಲ್ಗಾಟ್ ಪ್ರಸ್ಥಭೂಮಿಯಲ್ಲಿ ಬರುತ್ತದೆ. ಈ ಪ್ರಾಚೀನ ಕೋಟೆಯು ಹಲವಾರು ಯುದ್ಧಗಳಿಗೆ ಸಾಕ್ಷಿಯಾಗಿದೆ.

ಪ್ರಸ್ತುತ ಅವಶೇಷವಾಗಿರುವ ಈ ಕೋಟೆಯು ಗತ ಇತಿಹಾಸವನ್ನು ಸಾರುತ್ತ ಪ್ರವಾಸಿಗರಿಗೆ ಮಾಹಿತಿಯನ್ನು ಒದಗಿಸುತ್ತಿದೆ. ಈ ಕೋಟೆಗೆ ಹೋಗಲು ಯಾವುದೇ ದಾರಿಗಳಿಲ್ಲ. ಬದಲಿಗೆ ಬೆಟ್ಟದ ಬುಡದಿಂದ ಎರಡು ಗಂಟೆಗಳ ಶಿಖರಾರೋಹಣ ಮಾಡಿದರೆ ಈ ಕೋಟೆಯನ್ನು ನೀವು ತಲುಪಬಹುದು. ಈ ಆರೋಹಣವು ಪ್ರವಾಸಿಗರನ್ನು ನಗರದ ಗೌಜು ಗದ್ದಲಗಳಿಂದ ದೂರ ಕೊಂಡೊಯ್ಯುತ್ತದೆ.

ಈ ದಾರಿಯಲ್ಲಿ ನೀವು ರಾಯಕೋಟಾ ಗುಹಾಂತರ ದೇವಾಲಯವನ್ನು ನೋಡಬಹುದು. ಇದೂ ಸಹ ಅಂದಾಜು ಕೋಟೆಯಷ್ಟೇ ಹಳೆಯದು ಎಂದು ನಂಬಲಾಗಿದೆ. ಈ ಗುಹಾಂತರ ದೇವಾಲಯವು ಇಟ್ಟಿಗೆಗಳಿಂದ ನಿರ್ಮಾಣ ಮಾಡಲಾಗಿದೆ. ಬಹುಶಃ ಈ ಗುಹಾಂತರ ದೇವಾಲಯವನ್ನು ಕುದುರೆಗಳ ಲಾಯವಾಗಿ ಅಥವಾ ಶಸ್ತ್ರಾಗಾರವಾಗಿ ಅಥವಾ ಎರಡಕ್ಕು ಬಳಸಿರಬೇಕು ಎನಿಸುತ್ತದೆ. ಕೋಟೆಯ ತುದಿಯಲ್ಲಿ ಒಂದು ದೊಡ್ಡ ದೀಪವಿದೆ. ಹಬ್ಬಹರಿದಿನಗಳಂದು ಇದು ಸ್ಥಳೀಯರಿಗೆ ಬೆಳಕನ್ನು ನೀಡುತ್ತಿತ್ತು.

ಕೋಟೆಯ ಮೇಲಿನಿಂದ ನೀವು ಅದ್ಭುತವಾದ ನಗರದ ನೋಟ, ಕೆರೆಗಳು ಮತ್ತು ಬೆಟ್ಟಗುಡ್ಡಗಳ ಸೌಂದರ್ಯವನ್ನು ಸವಿಯಬಹುದು. ರಾಯಕೋಟವು ಒಂದು ಪ್ರಸಿದ್ಧ ಪ್ರವಾಸಿ ತಾಣವಾಗಿದೆ. ಆದರೆ ಏಕಾಂತ ಬಯಸುವ ಪ್ರವಾಸಿಗರು ಮತ್ತು ವಾರಾಂತ್ಯ ಕಳೆಯಲು ಬಯಸುವವರು ಸ್ವಲ್ಪ ಶ್ರಮವಹಿಸಿದರೆ ರಾಯಕೋಟದಲ್ಲಿ ತಮ್ಮ ಇಚ್ಛೆಯ ಸಮಯವನ್ನು ಕಳೆಯಬಹುದು.

One Way
Return
From (Departure City)
To (Destination City)
Depart On
06 Sep,Sun
Return On
07 Sep,Mon
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
06 Sep,Sun
Check Out
07 Sep,Mon
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
06 Sep,Sun
Return On
07 Sep,Mon