ಪಳಸ್ಸಿರಾಜಾ ಮ್ಯೂಸಿಯಂ ಇಲ್ಲಿನ ಈಸ್ಟ್ ಹಿಲ್‌ನಲ್ಲಿದೆ. ಕ್ಯಾಲಿಕಟ್‌ನಿಂದ 5 ಕಿ.ಮೀ. ದೂರದಲ್ಲಿ ಇದು ಇದ್ದು, ಇತಿಹಾಸವನ್ನು ಮೆಚ್ಚುವ, ಇಷ್ಟಪಡುವ ಪ್ರತಿಯೊಬ್ಬ ಪ್ರವಾಸಿಗನೂ ಇಲ್ಲಿ ಭೇಟಿ ನೀಡಲೇಬೇಕು. ಈ ಮ್ಯೂಸಿಯಂ ಐತಿಹಾಸಿಕ ಘಟನೆಗಳ ಸಾಕಷ್ಟು ಲೇಖನಗಳನ್ನು ಒಳಗೊಂಡಿದೆ. ಹಿಂದಿನ ಶತಮಾನಗಳನ್ನು ಅರಿಯಲು ಇವು ಸಹಕಾರಿಯಾಗಿವೆ. ಮ್ಯೂಸಿಯಂ ಪಕ್ಕದಲ್ಲೇ ಒಂದು ಕಲಾ ಗ್ಯಾಲರಿ ಇದೆ. ಇಲ್ಲಿ ಸಾಕಷ್ಟು ಜನಪ್ರಿಯ ಕಲಾಕೃತಿಗಳು ನೋಡಲು ಸಿಗುತ್ತವೆ. ಕೇರಳದ ಅತ್ಯಂತ ಜನಪ್ರಿಯ ಕಲಾವಿದ ರಾಜಾ ರವಿವರ್ಮರ ಕಲಾಕೃತಿ ಇಲ್ಲಿದೆ. ಇವರ ಚಿಕ್ಕಪ್ಪ ರಾಜಾ ರಾಜವರ್ಮರ ಕಲಾಕೃತಿಯನ್ನು ಕೂಡ ಈ ಮ್ಯೂಸಿಯಂನಲ್ಲಿ ಪ್ರದರ್ಶಿಸಲಾಗಿದೆ.
ಈ ಮ್ಯೂಸಿಯಂ ಕೇರಳ ರಾಜ್ಯ ಪ್ರಾಚ್ಯವಸ್ತು ಇಲಾಖೆ ನಡೆಸುತ್ತಿದೆ. ಐತಿಹಾಸಿಕ ವಸ್ತು ಹಾಗೂ ಇತಿಹಾಸದ ಮೇಲೆ ಜನರ ಗಮನ ಹೆಚ್ಚಾಗಲಿ ಎಂದು ಸ್ಥಾಪಿಸಲಾಗಿದೆ. ಅಲ್ಲದೇ ಇತಿಹಾಸ ತಜ್ಞರು, ಸಂಶೋಧಕರು ಹಾಗೂ ಆಸಕ್ತರ ಆಕರಗಳಿಗಾಗಿಯೂ ಬಳಸಲಾಗುತ್ತಿದೆ. ಇದಲ್ಲದೇ ಇಲ್ಲಿ ಸಾಕಷ್ಟು ಮ್ಯೂರಲ್ ಪೇಂಟಿಂಗ್‌ಗಳು, ಪುರಾತನ ನಾಣ್ಯಗಳು, ಆಕರ್ಷಕ ಫಲಕಗಳು, ದೇವಾಲಯಗಳ ಮಾದರಿಗಳು, ಕಲ್ಲಿನ ಛತ್ರಿ ಹಾಗೂ ಇನ್ನಷ್ಟು ಐತಿಹಾಸಿಕ ಸ್ಮಾರಕಗಳು ಇವೆ.
ಈ ಮ್ಯೂಸಿಯಂ ಹಾಗೂ ಕಲಾ ಗ್ಯಾಲರಿ ರಸ್ತೆ ಮಾರ್ಗದಲ್ಲಿ ಅತಿ ಸುಲಭವಾಗಿ ಸಿಗುತ್ತವೆ. ಸೋಮವಾರ ಹಾಗೂ ಸರಕಾರಿ ರಜಾ ದಿನಗಳನ್ನು ಹೊರತುಪಡಿಸಿ ಉಳಿದೆಲ್ಲಾ ದಿನ ಹಗಲು ಹೊತ್ತು ಸಾರ್ವಜನಿಕ ವೀಕ್ಷಣೆಗೆ ಮುಕ್ತವಿದೆ. ವೀಕ್ಷಕರಿಗೆ ಮ್ಯೂಸಿಯಂ ಒಳಬರಲು ಬೆಳಗ್ಗೆ 9 ರಿಂದ ಸಂಜೆ 4.30 ರವರೆಗೆ ಮಾತ್ರ ಅವಕಾಶ ಇದೆ.


Click it and Unblock the Notifications