ಬರಾನ್ಸಿತಾಬರಿಯು ಬರಾನ್‌ಗೆ ಸಮೀಪದಲ್ಲಿರುವ ಅತ್ಯಂತ ಜನಪ್ರಿಯ ಧಾರ್ಮಿಕ ಸ್ಥಳ. ಹಿಂದೂ ಪುರಾಣದ ಪ್ರಕಾರ ರಾಮನ ಪತ್ನಿಯಾದ ಸೀತಾದೇವಿಯು ಲವ ಮತ್ತು ಕುಶರಿಗೆ ಇದೇ ಪ್ರದೇಶದಲ್ಲಿ ಜನ್ಮ ನೀಡಿದ್ದಳು. ಸೀತಾ ದೇವಿಯು ರಾಜ್ಯ ತೊರೆದು ವನವಾಸ ಆರಂಭಿಸಿದ ನಂತರದಲ್ಲಿ ತನ್ನ ಇಬ್ಬರು ಮಕ್ಕಳ ಜೊತೆಗೆ ಇದೇ ಸ್ಥಳದಲ್ಲಿ ವಾಸಿಸಿದ್ದಳು.
ಸೀತಾಬರಿಗೆ ಬರುವ ಪ್ರವಾಸಿಗರು ಸೀತಾ ಮತ್ತು ಲಕ್ಷ್ಮಣರಿಗೆ ನಿರ್ಮಿಸಿದ ಇನ್ನೊಂದು ದೇವಸ್ಥಾವನ್ನು ಕೂಡಾ ನೋಡಬಹುದು. ಇಲ್ಲಿ ಏಳು ನೀರಿನ ಕುಂಡಗಳು ಇವೆ ಮತ್ತು ಇದರಲ್ಲಿ ಪ್ರಮುಖವಾದದ್ದು ಸೀತಾ ಕುಂಡ, ಲಕ್ಷ್ಮಣ ಕುಂಡ, ಲವಕುಶ ಕುಂಡ, ವಾಲ್ಮೀಕಿ ಕುಂಡ ಮತ್ತು ಸೂರ್ಯಕುಂಡವಾಗಿದೆ. ದಟ್ಟವಾದ ಅರಣ್ಯದ ಮಧ್ಯೆ ಇರುವ ಸೀತಾ ಕುಟಿಯ ಮಧ್ಯೆ ಕುಂಡಗಳು ಮತ್ತು ದೇವಸ್ಥಾನಗಳು ಇವೆ. ಮೇ ಮತ್ತು ಜೂನ್ ತಿಂಗಳ ಮಧ್ಯೆ ನಡೆಯುವ ಸಹರಿಯಾ ಮೇಳದಲ್ಲಿ ಅಪಾರ ಪ್ರಮಾಣದ ಭಕ್ತರು ಇಲ್ಲಿಗೆ ಹರಿದುಬರುತ್ತಾರೆ. ಜನಪ್ರಿಯ ಹಬ್ಬವಾದ ಸೀತಾಬರಿ ಮೇಳವು ಪ್ರತಿವರ್ಷ ಇಲ್ಲಿ ನಡೆಯುತ್ತದೆ.


Click it and Unblock the Notifications