Search
  • Follow NativePlanet
Share
ಮುಖಪುಟ » ಸ್ಥಳಗಳು » ಕೋಟಾ » ಆಕರ್ಷಣೆಗಳು
  • 01ರಾವ್ ಮಾಧೊ ಸಿಂಗ್ ವಸ್ತು ಸಂಗ್ರಹಾಲಯ

    ರಾವ್ ಮಾಧೊ ಸಿಂಗ್ ವಸ್ತು ಸಂಗ್ರಹಾಲಯ

    ರಾವ್ ಮಾಧೊ ಸಿಂಗ್ ವಸ್ತು ಸಂಗ್ರಹಾಲಯವು ಕೋಟಾದ ಪ್ರಮುಖ ಪ್ರವಾಸಿ ಆಕರ್ಷಣೆಗಳಲ್ಲಿ ಮುಂಚೂಣಿಯಲ್ಲಿ ನಿಲ್ಲುತ್ತದೆ. ಈ ಸಂಗ್ರಹಾಲಯಕ್ಕೆ ಕೋಟಾದ ಪ್ರಥಮ ರಾಜನಾದ ಮಾಧೊ ಸಿಂಗರ ಹೆಸರನ್ನು ಇಡಲಾಗಿದೆ. ಇದು ಮೊದಲು ಅರಮನೆಯಾಗಿತ್ತು, ನಂತರ ಇದನ್ನು ವಸ್ತು ಸಂಗ್ರಹಾಲಯವಾಗಿ ಮಾರ್ಪಾಡುಗೊಳಿಸಲಾಯಿತು. ಇಲ್ಲಿ ಪ್ರದರ್ಶನಕ್ಕೆ...

    + ಹೆಚ್ಚಿಗೆ ಓದಿ
  • 02ಕೋಟಾ ಬ್ಯಾರೇಜ್

    ಕೋಟಾ ಬ್ಯಾರೇಜ್ ಎಂಬುದು ಇಂದಿನ ಯುಗದ ಇಂಜಿನಿಯರಿಂಗ್ ಕೌಶಲ್ಯವನ್ನು ಸಮರ್ಥವಾಗಿ ಪ್ರತಿನಿಧಿಸುವ ಒಂದು ಅದ್ಭುತವಾದ ಬ್ಯಾರೇಜ್ ಆಗಿದ್ದು, ಹಲವಾರು ನಗರಗಳ ವಿವಿಧ ಉದ್ದೇಶಗಳನ್ನು ಪೂರೈಸುತ್ತಿದೆ. ಇದು ರಾಜಸ್ಥಾನ ಮತ್ತು ಮಧ್ಯ ಪ್ರದೇಶದ ರೈತರ ನೀರಾವರಿ ಬೇಡಿಕೆಯ ಪ್ರಮುಖ ಮೂಲವಾಗಿದೆ. ಇದರೊಂದಿಗೆ ಈ ಬ್ಯಾರೇಜ್ ವಿದ್ಯುಚ್ಛಕ್ತಿ...

    + ಹೆಚ್ಚಿಗೆ ಓದಿ
  • 03ಚಂಬಲ್ ಉದ್ಯಾನವನ

    ಚಂಬಲ್ ಉದ್ಯಾನವನವು ಅಮರ್ ನಿವಾಸ್ ಬಳಿ ಹರಿಯುವ ಚಂಬಲ್ ನದಿಯ ದಂಡೆಯಲ್ಲಿ ನೆಲೆಸಿದೆ. ಈ ಸುಂದರವಾದ ಮತ್ತು ಬೃಹತ್ ಉದ್ಯಾನವನವು ಪ್ರಶಾಂತವಾದ ವಾತಾವರಣದಲ್ಲಿ ನೆಲೆಗೊಂಡಿದ್ದು, ವಿಹಾರಕ್ಕಾಗಿ ಹೇಳಿ ಮಾಡಿಸಿದ ತಾಣವಾಗಿದೆ. ಉದ್ಯಾನವನದ ನಡುವೆಯಿರುವ ಕೊಳವು ಹಲವು ಮೊಸಳೆಗಳಿಗೆ ಆಶ್ರಯವನ್ನು ಒದಗಿಸಿದೆ. ಈ ಕೊಳದ ಮೇಲೆ ಒಂದು...

    + ಹೆಚ್ಚಿಗೆ ಓದಿ
  • 04ನಗರದ ಕೋಟೆಯ ಅರಮನೆ

    ನಗರದ ಕೋಟೆಯ ಅರಮನೆ

    ಈ ಅರಮನೆಯು ಕೋಟಾ ನಗರದ ಪೂರ್ವಭಾಗದಲ್ಲಿರುವ ಚಂಬಲ್ ನದಿಯ ದಂಡೆಯಲ್ಲಿ ನೆಲೆಸಿದೆ. ಇದು ತನ್ನ ಬೃಹತ್ ಕೋಟೆ ಸಂಕೀರ್ಣಗಳಿಂದಾಗಿ ರಾಜಸ್ಥಾನದಲ್ಲಿಯೆ ಹೆಸರುವಾಸಿಯಾಗಿದೆ. ಈ ಅರಮನೆಯು ಕೋಟಾ ನಗರದ ಪ್ರಮುಖ ಪ್ರವಾಸಿ ಆಕರ್ಷಣೆಯಾಗಿದೆ. ಕೋಟೆಯ ಕಠಿಣವಾದ ಗೋಡೆಗಳು, ಕೈ ಹಿಡಿಗಳು, ಬುರುಜುಗಳು ಮತ್ತು ಗುಮ್ಮಟಗಳನ್ನು ಹೊಂದಿದ್ದು, ಆ...

    + ಹೆಚ್ಚಿಗೆ ಓದಿ
  • 05ಗರಾಡಿಯ ಮಹಾದೇವ್ ದೇವಾಲಯ

    ಗರಾಡಿಯ ಮಹಾದೇವ್ ದೇವಾಲಯ

    ಗರಾಡಿಯ ಮಹಾದೇವ್ ದೇವಾಲಯವು ಕೋಟಾದ ಬಳಿ ಹರಿಯುವ ಚಂಬಲ್ ನದಿ ಸಮೀಪದಲ್ಲಿರುವ ಪ್ರಮುಖ ದೇವಾಲಯವಾಗಿದೆ. ಈ ಸ್ಥಳವು ಮಂತ್ರಮುಗ್ಧಗೊಳಿಸುವಂತಹ ಚಂಬಲ್ ಕಮರಿಗಳ ಮತ್ತು ನದಿ ಮುಖಜ ಭೂಮಿಯ ನೋಟವನ್ನು ಒದಗಿಸುತ್ತದೆ. ಇದು ಈ ಪ್ರಾಂತ್ಯದ ಪ್ರಮುಖ ವಿಹಾರ ತಾಣಗಳಲ್ಲಿ ಒಂದಾಗಿ ಸ್ಥಾನಪಡೆದಿದೆ. ಪ್ರಕೃತಿಯ ಮಡಿಲಲ್ಲಿ, ಪ್ರಶಾಂತವಾದ...

    + ಹೆಚ್ಚಿಗೆ ಓದಿ
  • 06ಜಗಮಂದಿರ್ ಅರಮನೆ

    ಜಗಮಂದಿರ್ ಅರಮನೆಯು ಕೃತಕವಾಗಿ ನಿರ್ಮಿಸಲಾಗಿರುವ ಕಿಶೋರ್ ಸಾಗರ್ ಕೆರೆಯ ನಡುವೆ ಸುಂದರವಾದ ಪ್ರಶಾಂತ ವಾತಾವರಣದಲ್ಲಿ ನೆಲೆಸಿದೆ. ಈ ಕೆರೆಯನ್ನು ಬುಂಡಿಯ ಯುವರಾಜ ಡೆಹ್ರಾ ಡೆಹ್ 1346ರಲ್ಲಿ ನಿರ್ಮಿಸಿದರೆ, ಅರಮನೆಯನ್ನು ಕೋಟಾದ ರಾಣಿಯೊಬ್ಬಳು 1740ರಲ್ಲಿ ನಿರ್ಮಿಸಿದಳು. ಈ ಅರಮನೆಯನ್ನು ಸುಂದರವಾದ ಕೆಂಪು ಮರಳುಗಲ್ಲುಗಳಿಂದ...

    + ಹೆಚ್ಚಿಗೆ ಓದಿ
  • 07ಗೋದಾವರಿ ಧಾಮ್ ದೇವಾಲಯ

    ಗೋದಾವರಿ ಧಾಮ್ ದೇವಾಲಯ

    ಬಿಳಿಯ ಅಮೃತಶಿಲೆಯಿಂದ ನಿರ್ಮಾಣಗೊಂಡಿರುವ ಗೋದಾವರಿ ಧಾಮ್ ದೇವಾಲಯವು ಚಂಬಲ್ ನದಿಯ ದಂಡೆಯಲ್ಲಿದ್ದು, ಕೋಟಾದಲ್ಲಿರುವ ಸುಂದರವಾದ ದೇವಾಲಯಗಳಲ್ಲಿ ಒಂದಾಗಿದೆ. ಈ ದೇವಾಲಯದ ಗೋಪುರಗಳು ಎತ್ತರವಾಗಿದ್ದು, ನೋಡಲು ಮನಮೋಹಕವಾಗಿವೆ. ಪ್ರತಿ ವರ್ಷ ಭಕ್ತಾಧಿಗಳು ಅಧಿಕ ಸಂಖ್ಯೆಯಲ್ಲಿ ಇಲ್ಲಿಗೆ ಆಗಮಿಸುತ್ತಾರೆ.

    + ಹೆಚ್ಚಿಗೆ ಓದಿ
  • 08ರಾಣಿಜಿ ಕಿ ಬಾವ್ರಿ

    ರಾಣಿಜಿ ಕಿ ಬಾವ್ರಿ

    ರಾಣಿಜಿ ಕಿ ಬಾವ್ರಿ (ಮೆಟ್ಟಿಲುಗಳಿರುವ ಬಾವಿ) ಯನ್ನು 1699 ರಲ್ಲಿ ರಾವ್ ರವರ ಯುವರಾಣಿಯಾದ ನಾಥವತಿಯಿಂದ ನಿರ್ಮಿಸಲ್ಪಟ್ಟಿತು. ಬಾವ್ರಿಗಳು ಮಧ್ಯಕಾಲೀನ ಭಾರತದಲ್ಲಿ ರಚನೆಗೊಂಡ ಸಾರ್ವಜನಿಕ ರಚನೆಗಳಲ್ಲಿ ಮಹತ್ವದ ಪಾತ್ರವನ್ನು ವಹಿಸಿದ್ದವು. ಈ ಮೆಟ್ಟಿಲುಗಳಿರುವ ಬಾವಿಯು ನಿರ್ದಿಷ್ಟವಾಗಿ 165 ಅಡಿಯಷ್ಟು ಆಳವಾಗಿದ್ದು, ರಜಪೂತ...

    + ಹೆಚ್ಚಿಗೆ ಓದಿ
  • 09ಹವೇಲಿ ದೇವ್ತಾ ಶ್ರೀಧರ್ ಜೀ

    ಹವೇಲಿ ದೇವ್ತಾ ಶ್ರೀಧರ್ ಜೀ

    ಹವೇಲಿ ದೇವ್ತಾ ಶ್ರೀಧರ್ ಜೀ ಎಂಬುದು ಕೋಟಾ ನಗರದಲ್ಲಿನ ಮಾರುಕಟ್ಟೆಯ ಮಧ್ಯೆ ಇರುವ ಸುಂದರವಾದ ರಚನೆಯಾಗಿದೆ. ಈ ಸ್ಥಳವು ಇಲ್ಲಿರುವ ವರ್ಣ ಚಿತ್ರಗಳಿಗೆ ಮತ್ತು ಚಿತ್ರಲೇಖನಗಳಿಗಾಗಿ ಖ್ಯಾತಿ ಪಡೆದಿದೆ.

    + ಹೆಚ್ಚಿಗೆ ಓದಿ
  • 10ಸರ್ಕಾರಿ ವಸ್ತು ಸಂಗ್ರಹಾಲಯ

    ಬ್ರಿಜ್ ವಿಲಾಸ್ ಅರಮನೆಯಲ್ಲಿರುವ ಸರ್ಕಾರಿ ವಸ್ತು ಸಂಗ್ರಹಾಲಯವು ಕೋಟಾದ ಜನಪ್ರಿಯ ಪ್ರವಾಸಿ ಆಕರ್ಷಣೆಯಾಗಿದೆ. ಇದು ಕಿಶೋರ್ ಸಾಗರ್ ಕೆರೆಯ ಬಳಿಯಲ್ಲಿ ನೆಲೆಗೊಂಡಿದೆ. ಈ ವಸ್ತು ಸಂಗ್ರಹಾಲಯವು ಹಳೆಯ ನಾಣ್ಯಗಳು, ಪ್ರಾಚೀನ ಹಸ್ತ ಪ್ರತಿಗಳು ಮತ್ತು ಹಡೊಶಿಯೊ ಶಿಲ್ಪಗಳ ಅಸಾಧಾರಣವಾದ ಸಂಗ್ರಹವನ್ನು ಹೊಂದಿದೆ. ಇವುಗಳೆಲ್ಲದರ...

    + ಹೆಚ್ಚಿಗೆ ಓದಿ
  • 11ಬರೋಲಿ

    ಬರೋಲಿ

    ಬರೋಲಿ ಎಂಬ ಸುಂದರವಾದ ಸ್ಥಳವು ಕೋಟಾದಿಂದ ಅಂದಾಜು 45 ಕಿ.ಮೀ ದೂರದಲ್ಲಿದೆ. ಇದು ಈ ಸ್ಥಳದಿಂದ ರಾಣಾ ಪ್ರತಾಪ್ ಸಾಗರದ ಕಡೆ ಸಾಗುವ ಹಾದಿಯಲ್ಲಿ ಬರುತ್ತದೆ. ಬರೋಲಿಯು ತನ್ನ ಶಾಂತವಾದ ಮತ್ತು ಮುದನೀಡುವಂತಹ ವಾತಾವರಣದಿಂದ ದೇಶದೆಲ್ಲೆಡೆಯಿಂದ ಪ್ರವಾಸಿಗರನ್ನು ಅಧಿಕ ಸಂಖ್ಯೆಯಲ್ಲಿ ತನ್ನತ್ತ ಸೆಳೆಯುತ್ತಿದೆ. ಈ ಸ್ಥಳವು ಹಳೆಯದಾದ...

    + ಹೆಚ್ಚಿಗೆ ಓದಿ
  • 12ಮಥುರಾಧೀಶ್ ಮಂದಿರ್

    ಮಥುರಾಧೀಶ್ ಮಂದಿರ್

    ಮಥುರಾಧೀಶ್ ಮಂದಿರವು ಕೋಟಾದ ಪ್ರಸಿದ್ಧವಾದ ಧಾರ್ಮಿಕ ಸ್ಥಳಗಳಲ್ಲಿ ಒಂದಾಗಿದೆ. ಈ ದೇವಾಲಯದಲ್ಲಿ ಭಗವಾನ್ ಕೃಷ್ಣ , ಜೊತೆಗೆ ರಾಧಾ ಮತ್ತು ಕೃಷ್ಣನ ಪರಮ ಭಕ್ತರಾದ ವಲ್ಲಭ ಪಂಥರನ್ನು ಕಾಣಬಹುದು.

    + ಹೆಚ್ಚಿಗೆ ಓದಿ
  • 13ಕೈಥೂನ್

     

    ಕೈಥೂನ್ ಇಲ್ಲಿ ತಯಾರಿಸಲಾಗುವ ಕೈಯಿಂದ ನೇಯ್ದ ಕೋಟಾ ದೊರಿಯ ಸೀರೆಗಳಿಗೆ ಹೆಸರುವಾಸಿಯಾಗಿದೆ. ಗುಣಮಟ್ಟದಿಂದ ಕೂಡಿದ ಹತ್ತಿಯ ಬಟ್ಟೆಗಳ ಮೇಲೆ ಚಿನ್ನದ ಮತ್ತು ಬೆಳ್ಳಿಯ ನೂಲುಗಳಿಂದ ಸುಂದರವಾಗಿ ಕಸೂತಿ ಮಾಡಿದ ಸೀರೆಗಳು ಇಲ್ಲಿ ದೊರೆಯುತ್ತವೆ. ಆಸಕ್ತ ಪ್ರವಾಸಿಗರು ಈ ಸೀರೆಗಳನ್ನು ನೇಯುವ ಪ್ರಕ್ರಿಯೆಯನ್ನು ಸಹ...

    + ಹೆಚ್ಚಿಗೆ ಓದಿ
  • 14ಅಲ್ನಿಯ

    ಅಲ್ನಿಯ

    ಅಲ್ನಿಯ ಎಂಬುದು ಕೋಟಾಗೆ ಸಮೀಪದ ಸ್ಥಳವಾಗಿದ್ದು, ತನ್ನಲ್ಲಿರುವ ಇತಿಹಾಸ ಪೂರ್ವ ಕಾಲದ ಕೆತ್ತನೆಗಳಿಗಾಗಿ ಖ್ಯಾತಿಪಡೆದಿದೆ. ಪುರಾತತ್ವ ಶಾಸ್ತ್ರಜ್ಞರು ಮತ್ತು ಇತಿಹಾಸಕಾರರು ಇಲ್ಲಿನ ಕಲ್ಲಿನ ಕೆತ್ತನೆಗಳು ಇತಿಹಾಸ ಪೂರ್ವ ಕಾಲಕ್ಕೆ ಸೇರಲ್ಪಟ್ಟವು ಎಂದು ಖಚಿತಪಡಿಸಿದ್ದಾರೆ. ಈ ಕೆತ್ತನೆಗಳು ಹರಿತವಾದ ಕಲ್ಲಿನ ಮತ್ತು ಶಿಲಾಯುಧಗಳ...

    + ಹೆಚ್ಚಿಗೆ ಓದಿ
  • 15ದರ್ರಾ ವನ್ಯ ಜೀವಿ ಧಾಮ

    ದರ್ರಾ ವನ್ಯ ಜೀವಿ ಧಾಮವನ್ನು 1955 ರಲ್ಲಿ ಸ್ಥಾಪಿಸಲಾಯಿತು. ಮೊದಲಿಗೆ ಇಲ್ಲಿ ವಿಪುಲವಾಗಿ ಖಡ್ಗ ಮೃಗಗಳು, ಜಿಂಕೆಗಳು ಮತ್ತು ಹುಲಿಗಳು ಇದ್ದ ಕಾರಣದಿಂದ ಈ ಕಾಡು ಕೋಟಾದ ರಾಜರಿಗೆ ಬೇಟೆಯಾಡಲು ನೆಚ್ಚಿನ ತಾಣವಾಗಿತ್ತು. ಪ್ರಸ್ತುತ ಈಗ ಈ ವನ್ಯ ಜೀವಿಧಾಮವು ಜಿಂಕೆ, ಕರಡಿ, ತೋಳ, ಹರಿಣಿಗಳು, ಚಿರತೆಗಳು ಮತ್ತು ನೀಲ್ಗಾಯ್ ಗಳು...

    + ಹೆಚ್ಚಿಗೆ ಓದಿ
One Way
Return
From (Departure City)
To (Destination City)
Depart On
29 Mar,Fri
Return On
30 Mar,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
29 Mar,Fri
Check Out
30 Mar,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
29 Mar,Fri
Return On
30 Mar,Sat