ಕೊಲ್ಹಾಪುರ ಎಂದಾಕ್ಷಣ ಎಲ್ಲರ ನೆನಪಿಗೆ ಬರುವುದು ಕೊಲ್ಹಾಪುರಿ ಚಪ್ಪಲಿಗಳು. ಈ ಸಾಂಪ್ರದಾಯಿಕ ಪಾದರಕ್ಷೆಗಳ ಉದ್ಯಮವು ಕೊಲ್ಹಾಪುರದಲ್ಲೇ ಅತ್ಯಂತ ಅನನ್ಯವಾಗಿರುವುದಲ್ಲದೇ ಇಡೀ ಭಾರತದಲ್ಲೆ ಬಹಳ ಜನಪ್ರಿಯವಾಗಿದೆ. ಈ ಪಾದರಕ್ಷೆಗಳ ವಿಶೇಷತೆಯೆಂದರೆ ಯಂತ್ರಗಳನ್ನುಪಯೊಗಿಸಲಾರದೆ ಕೈಗಳಿಂದ ಮಾಡಲ್ಪಟ್ಟಿರುವುದು.
ಆಭರಣಗಳ ಜೊತೆ ಮಸಾಲೆ ಖಾದ್ಯಗಳ ಮಾರುಕಟ್ಟೆಯು ಇಲ್ಲಿ ತುಂಬ ಹೆಸರುವಾಸಿಯಾಗಿದೆ. ಪ್ರತಿದಿನವೂ ಅತಿ ಹೆಚ್ಚಿನ ಪ್ರಮಾಣದಲ್ಲಿ ಮಾರಾಟವಾಗುವ ಎರಡು ವಸ್ತುಗಳೆಂದರೆ ಕಂದಿ ಪೆಢೆ ಮತ್ತು ಕೊಲ್ಹಾಪುರಿ ಬೆಳ್ಳುಳ್ಳಿ ಮಸಾಲಾ ಚಟ್ನಿ.


Click it and Unblock the Notifications