Search
  • Follow NativePlanet
Share
ಮುಖಪುಟ » ಸ್ಥಳಗಳು » ಕೊಲ್ಹಾಪುರ » ಆಕರ್ಷಣೆಗಳು » ಮಹಾಲಕ್ಷ್ಮಿ ದೇವಸ್ಥಾನ

ಮಹಾಲಕ್ಷ್ಮಿ ದೇವಸ್ಥಾನ, ಕೊಲ್ಹಾಪುರ

1

ಈ ದೇವಸ್ಥಾನವು ಮಹಲಕ್ಷ್ಮಿ ದೇವತೆಗೆ ಮುಡುಪಾಗಿದೆ. ಭಾರತದಲ್ಲಿ ಐಶ್ವರ್ಯ ಮತ್ತು ಸಂಪತ್ತಿನ ಸಂಕೇತವಾಗಿ ಆರಾಧಿಸಲ್ಪಡುವ ಜನಪ್ರಿಯ ದೇವತೆ ಮಹಾಲಕ್ಷ್ಮಿಯಾಗಿದ್ದಾಳೆ. ಇದೊಂದು ಪ್ರಾಚೀನ,ಪುರಾತನ ದೇವಾಲಯವಾಗಿದ್ದು ಕೊಲ್ಹಾಪುರ ನಗರದ ಹೃದಯ ಭಾಗದಲ್ಲೇ ಇದೆ. ಈ ದೇವಾಲಯದ ಬಗ್ಗೆ ಪುರಾಣದಲ್ಲೂ ಉಲ್ಲೇಖವಿದ್ದು, 108 ಶಕ್ತಿಪೀಠಗಳಲ್ಲಿ ಇದೂ ಕೂಡ ಒಂದಾಗಿದೆ.

ಪ್ರತಿ ವರ್ಷವು ಲಕ್ಷಾಂತರ ಭಕ್ತರು ಮಾತೆಯ ಆಶೀರ್ವಾದ ಪಡೆಯಲು ಆಗಮಿಸುತ್ತಿದ್ದು, ಅವರ ನಡುವೆ ಮಹಾಲಕ್ಷ್ಮಿ ದೇವತೆಯು ಅಂಬಾ ಬಾಯಿ ಎಂದೇ ಜನಪ್ರಿಯಳಾಗಿದ್ದಾಳೆ. ಈ ಮಹಾಲಕ್ಷ್ಮಿ ದೇವಸ್ಥಾನದಿಂದಾಗಿಯೇ ಕೊಲ್ಹಾಪುರವು ಭಾರತದಲ್ಲಿಯ ಕೆಲವೆ ಕೆಲವು ಉಚ್ಛಮಟ್ಟದ ಆಧ್ಯಾತ್ಮಿಕ ಕೇಂದ್ರಗಳಲ್ಲಿ ಒಂದಾಗಿದೆ.

ಈ ದೇವಾಲಯವು 7 ನೇ ಶತಮಾನದ್ದಾಗಿದ್ದು ಚಾಲೂಕ್ಯ ವಂಶದ ಕರಣದೇವ ರಾಜನಿಂದ ನಿರ್ಮಿಸಲ್ಪಟ್ಟಿದೆ. ಇದರ ವಾಸ್ತುಶಿಲ್ಪವು ಹೇಮಂದಪತಿಯಿಂದ ಪ್ರೇರಿತಗೊಂಡಿದೆ. ನಂತರ 8 ನೇ ಶತಮಾನದಲ್ಲಿ ಯಾದವ ವಂಶಜರು ಈ ದೇವಾಲಯದ ಅಂದವನ್ನು ಮತ್ತಷ್ಟು ಹೆಚ್ಚಿಸಿದರೆನ್ನಲಾಗಿದೆ. ವಿಸ್ಮಯವೆಂದರೆ ಪ್ರತಿದಿನವೂ ಸೂರ್ಯನ ಕಿರಣಗಳು ದೇವಿಯ ಮುರ್ತಿಯನ್ನು ಸ್ಪರ್ಶಿಸಿ ಹೊಳೆಯುವ ಹಾಗೆ ಈ ದೇವಾಲಯದ ನಿರ್ಮಾಣವನ್ನು ಮಾಡಲಾಗಿದೆ.

ನವರಾತ್ರಿಯಂಥ ಹಬ್ಬಗಳಲ್ಲಿ ಸ್ಥಳೀಯರಲ್ಲದೇ ದೇಶದ ವಿವಿಧೆಡೆಯಿಂದ ಅಸಂಖ್ಯಾತ ಭಕ್ತರು ಕೊಲ್ಹಾಪುರಿಗೆ ಮುಗಿಬಿದ್ದು ಅಂಬಾ ದೇವಿಯ ದರ್ಶನ ಪಡೆಯಲು ಕಾತುರರಾಗಿರುತ್ತಾರೆ. ಈ ಸಮಯದಲ್ಲಿ ದೇವಸ್ಥಾನವು ಎದ್ದು ಕಾಣುವ ಬಣ್ಣಗಳಿಂದ ಅಲಂಕೃತಗೊಂಡು, ಸಂಗೀತಮಯ ವಾತಾವರಣವನ್ನು ಹೊಂದಿರುತ್ತದೆ.

One Way
Return
From (Departure City)
To (Destination City)
Depart On
19 Apr,Fri
Return On
20 Apr,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
19 Apr,Fri
Check Out
20 Apr,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
19 Apr,Fri
Return On
20 Apr,Sat