ಪ್ರವಾಸಿಗರು ಕೋಲಾರ ಜಿಲ್ಲೆಗೆ ಭೇಟಿಕೊಟ್ಟಾಗ ಇಲ್ಲಿನ ಮಾರ್ಕಂಡೇಯ ಬೆಟ್ಟಕ್ಕೆ ಭೇಟಿಕೊಡಬಹುದು. ಇದು ಒಕ್ಕಲೇರಿ ಗ್ರಾಮಕ್ಕೆ ಸನಿಹದಲ್ಲಿದೆ. ಇದು ಮಹರ್ಷಿ ಮಾರ್ಕಂಡೇಯನಿಂದಾಗಿ ಈ ಹೆಸರು ಪಡೆದಿದೆ. ಸ್ಥಳೀಯರ ನಂಬಿಕೆಯ ಪ್ರಕಾರ ಮಾರ್ಕಂಡೇಯನು ಇಲ್ಲಿ ತಪಸ್ಸನ್ನು ಆಚರಿಸದನಂತೆ. ಪ್ರವಾಸಿಗರು ಇಲ್ಲಿಗೆ ಭೇಟಿಕೊಡುವ ಹಾದಿಯಲ್ಲಿ ಇದೇ ಹೆಸರಿನ ಜಲಾಶಯವನ್ನು ಸಹಾ ನೋಡಬಹುದು. ಈ ದೇವಾಲಯದಲ್ಲಿ ಯಮಪಾಶದ ಗುರುತುಗಳನ್ನು ಕಾಣಬಹುದು ಎಂದು ಭಕ್ತಾಧಿಗಳು ನಂಬುತ್ತಾರೆ. ಮಾರ್ಕಂಡೇಯ ಬೆಟ್ಟವು ದಟ್ಟ ಕಾಡಿನಿಂದ ಸುತ್ತುವರೆದಿದ್ದು ಪ್ರವಾಸಿಗರು ಪ್ರಶಾಂತವಾದ ವಾತಾವರಣದಲ್ಲಿ ಕಾಲಕಳೆಯಬೇಕೆಂದು ಬಯಸಿದ್ದೆ ಆದಲ್ಲಿ ಇಲ್ಲಿಗೆ ಭೇಟಿಕೊಡಬಹುದು.