ಕೊಡೈ ಕೆರೆಯು ನಕ್ಷತ್ರಾಕಾರದಲ್ಲಿ ನಿರ್ಮಿಸಲಾದ ಒಂದು ಕೃತಕ ಕೆರೆಯಾಗಿದೆ. ಇದನ್ನು 1863ರಲ್ಲಿ ನಿರ್ಮಿಸಲಾಯಿತು. ಇದು ಕೊಡೈಕೆನಲ್‍ನ ಅತ್ಯಂತ ಪ್ರಸಿದ್ಧ ಪ್ರವಾಸಿ ಆಕರ್ಷಣೆಯಾಗಿದೆ. ಇದು ಬಸ್ ನಿಲ್ದಾಣದಿಂದ ಅರ್ಧ ಕಿ.ಮೀ ದೂರದಲ್ಲಿ ನೆಲೆಗೊಂಡಿದೆ. 60 ಕಿ.ಮೀ ವಿಸ್ತೀರ್ಣವನ್ನು ಹೊಂದಿರುವ ಈ ಕೆರೆಯಲ್ಲಿ ಒಂದು ಬೋಟ್ ಕ್ಲಬ್ ಸಹ ಇದೆ. ಇಲ್ಲಿ ದೋಣಿ ವಿಹಾರ ಮಾಡಲು ಬಯಸುವವರಿಗಾಗಿ ಹಾಯಿ ದೋಣಿಗಳು ಮತ್ತು ಪೆಡಲ್ ದೋಣಿಗಳು ಬಾಡಿಗೆಗೆ ದೊರೆಯುತ್ತವೆ.
ಅಲ್ಲದೆ ಈ ಕೆರೆಯ ಸುತ್ತ ಇರುವ ಹಾದಿಯಲ್ಲಿ ಚಲಾಯಿಸಲು ಕುದುರೆಗಳು ಮತ್ತು ಸೈಕಲ್‍ಗಳು ಬಾಡಿಗೆಗೆ ದೊರೆಯುತ್ತವೆ. ಈ ಹಾದಿಯು 5 ಕಿ.ಮೀ ಉದ್ದವಿದ್ದು, ನಡಿಗೆಯನ್ನು ಆನಂದಿಸಲು ಬಯಸುವವರಿಗು ಸಹ ಉತ್ತಮ ಆಯ್ಕೆಯಾಗಿರುತ್ತದೆ. ಈ ಹಾದಿಯು ನಗರದ ಮಧ್ಯ ಭಾಗದಲ್ಲಿದ್ದು, ವಿಶ್ರಾಂತಿ ತಾಣವಾಗಿ ಪ್ರವಾಸಿಗರ ವಲಯದಲ್ಲಿ ಮತ್ತು ಸ್ಥಳೀಯರ ವಲಯದಲ್ಲಿ ಅತ್ಯಂತ ಜನಪ್ರಿಯವಾಗಿದೆ.


Click it and Unblock the Notifications