Search
  • Follow NativePlanet
Share
ಮುಖಪುಟ » ಸ್ಥಳಗಳು » ಕೊಡೈಕೆನಲ್ » ಹವಾಮಾನ

ಕೊಡೈಕೆನಲ್ ಹವಾಮಾನ

ಕೊಡೈಕೆನಲ್‍ಗೆ ಭೇಟಿಕೊಡಲು ಏಪ್ರಿಲ್‍ನಿಂದ ಜೂನ್ ಮತ್ತು ಸೆಪ್ಟೆಂಬರ್ ನಿಂದ ಅಕ್ಟೋಬರ್ ನಡುವಿನ ಅವಧಿಯು ಅತ್ಯುತ್ತಮ ಸಮಯವಾಗಿರುತ್ತದೆ. ಜೂನ್‍ನಿಂದ ಆಗಸ್ಟ್ ನಡುವಿನ ಅವಧಿಯು ಇಲ್ಲಿ ಮುಂಗಾರ ಮಳೆ ಬೀಳುವುದರಿಂದ ಪ್ರಾಕೃತಿಕ ಸ್ಥಳಗಳು ನವವಧುವಿನಂತೆ ಕಂಗೊಳಿಸುತ್ತಿರುತ್ತವೆ. ಆಗ ಭೇಟಿಕೊಟ್ಟರೆ ನೀವು ಸ್ವರ್ಗವನ್ನು ನೋಡಿದ ಅನುಭವ ಪಡೆಯಬಹುದು. ಇದಕ್ಕಿಂತ ಹೆಚ್ಚಾಗಿ ಯಾವುದೇ ವಾರ, ತಿಥಿ, ನಕ್ಷತ್ರ ನೋಡದೆ ಈ ಗಿರಿಧಾಮಕ್ಕೆ ವರ್ಷದ ಯಾವುದೇ ದಿನ ಬೇಕಾದರು ಭೇಟಿಕೊಡಬಹುದು.

ಬೇಸಿಗೆಗಾಲ

ಕೊಡೈಕೆನಲ್‍ನಲ್ಲಿ ಬೇಸಿಗೆಯು ಮಾರ್ಚ್ ಮತ್ತು ಮೇ ತಿಂಗಳಿನಲ್ಲಿ ಅನುಭವವಾಗುತ್ತದೆ. ಆಗ ಇಲ್ಲಿನ ಉಷ್ಣಾಂಶವು  20° ಸೆಲ್ಶಿಯಸ್‍ನಿಂದ 34° ಸೆಲ್ಶಿಯಸ್‍ವರೆಗೆ ಇರುತ್ತದೆ. ಈ ಸಮಯದಲ್ಲಿ ಇಲ್ಲಿನ ಉಷ್ಣಾಂಶವು ಚಾರಣ ಮತ್ತು ಸಾಹಸ ಕ್ರೀಡೆಗಳನ್ನು ಕೈಗೊಳ್ಳಲು ಹೇಳಿ ಮಾಡಿಸಿದಂತಿರುತ್ತದೆ.

ಮಳೆಗಾಲ

ಇಲ್ಲಿ ಮಳೆಗಾಲವು ಜೂನ್‍ನಿಂದ ಸೆಪ್ಟೆಂಬರ್ ವರೆಗೆ ಇರುತ್ತದೆ. ಆಗ ಇಲ್ಲಿ ಮಿತಪ್ರಮಾಣದ ಮಳೆಯಾಗುತ್ತದೆ. ಅಲ್ಲದೆ ಈ ಅವಧಿಯಲ್ಲಿ ಇಲ್ಲಿನ ವಾತಾವರಣವು ಅತ್ಯಂತ ತಾಜಾತನದಿಂದ ಕೂಡಿ, ಪ್ರವಾಸಿಗರಿಗೆ ಮುದ ನೀಡುತ್ತದೆ.

ಚಳಿಗಾಲ

ಕೊಡೈಕೆನಲ್‍ನಲ್ಲಿ ಚಳಿಗಾಲವು ನವೆಂಬರ್ ನಿಂದ ಜನವರಿಯವರೆಗೆ ಇರುತ್ತದೆ. ಈ ಅವಧಿಯಲ್ಲಿ ಇಲ್ಲಿನ ಉಷ್ಣಾಂಶವು 30° ಸೆಲ್ಶಿಯಸ್‍ನಿಂದ 8° ಸೆಲ್ಶಿಯಸ್ ನಡುವೆ ಇರುತ್ತದೆ. ಇಲ್ಲಿನ ಸ್ಥಳಗಳನ್ನು ನೋಡಲು ಮತ್ತು ಇನ್ನಿತರ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಲು ಈ ಸಮಯವು ಹೇಳಿ ಮಾಡಿಸಿದ ಸಮಯವಾಗಿರುತ್ತದೆ.