ಕೊಚ್ಚಿಯ ವಿರಾಮ ತಾಣಗಳ ಪೈಕಿ ಸುಭಾಷ್ ಚಂದ್ರ ಬೋಸ್ ಪಾರ್ಕ್ ಕೂಡ ಒಂದಾಗಿದೆ. ಸುಭಾಷ್ ಪಾರ್ಕ್ ಎಂತಲೂ ಇದನ್ನು ಕರೆಯುತ್ತಾರೆ. ಇದು ಕೊಚ್ಚಿ ಮಧ್ಯಭಾಗದಲ್ಲಿರುವ ಮಹಾರಾಜ ಕಾಲೇಜಿನ ಪಕ್ಕದಲ್ಲಿದೆ. ರೈಲ್ವೇ ನಿಲ್ದಾಣದಿಂದ ಕೆಲವೇ ನಿಮಿಷಗಳಲ್ಲಿ ಕಾಲ್ನಡಿಗೆಯಲ್ಲೇ ತಲುಪಬಹುದಾದಷ್ಟು ಸಮೀಪದಲ್ಲಿದೆ. ಮಕ್ಕಳು ಮತ್ತು ವಯಸ್ಕರು ಹೆಚ್ಚಾಗಿ ಇಲ್ಲಿಗೆ ಆಗಮಿಸುತ್ತಾರೆ. ಭಾರತದ ಹೆಸರಾಂತ ಸ್ವಾತಂತ್ರ್ಯ ಹೋರಾಟಗಾರ ಬೋಸ್ ಹೆಸರನ್ನು ಈ ಉದ್ಯಾನಕ್ಕೆ ಇಡಲಾಗಿದೆ. ವೇಂಬನಾಡ್ ಸರೋವರ ಮತ್ತು ಕೊಚ್ಚಿ ಬಂದರಿನ ಹಿನ್ನೀರು ಈ ಉದ್ಯಾನವನ್ನುವನ್ನು ಸುತ್ತುವರೆದು ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸಿದೆ. ಎರ್ನಾಕುಲತಪ್ಪನ್ ದೇವಸ್ಥಾನ, ದರ್ಬಾರ್ ಹಾಲ್, ಕೊಚ್ಚಿ ನಗರದ ದೋಣಿ ಮತ್ತು ಕಡಲ ವಿಹಾರ, ಹಳೆಯ ಶಿವ ದೇವಾಲಯ, ಮಕ್ಕಳ ಸಂಚಾರಿ ಉದ್ಯಾನವನ ಇವು ಇಲ್ಲೇ ಸಮೀಪದಲ್ಲಿ ಸಿಗುವ ಆಕರ್ಷಣೆಗಳು.
ಸ್ಕೇಟರುಗಳಿಗೆ ಹಾಗೂ ವೀಕ್ಷಕರಿಗೆ ಅತ್ಯುತ್ತಮ ಮನರಂಜನೆ ಒದಗಿಸುವ ರೋಲರ್ ಸ್ಕೇಟಿಂಗ್ ಟ್ರ್ಯಾಕ್ ಕೂಡಾ ಇಲ್ಲಿದೆ. ಪಾರ್ಕ್ ನವೀಕರಣ ಕೆಲಸವೂ ನಡೆಯುತ್ತಿದೆ.


Click it and Unblock the Notifications