ಭಾರತದಲ್ಲಿನ ಪ್ರಾಚೀನ ದೇವಾಲಯಗಳ ಪೈಕಿ ಕೊಚ್ಚಿಯಲ್ಲಿರುವ ಶಾಂತನಗೋಪಾಲ ಕೃಷ್ಣಸ್ವಾಮಿ ದೇವಸ್ಥಾನವೂ ಒಂದು. ದೇವಸ್ಥಾನದ ಬಳಿ ಸಿಕ್ಕಿರುವ ಶಾಸನದಲ್ಲಿ ಉಲ್ಲೇಖಿಸಿರುವ ಪ್ರಕಾರ ಕ್ರಿಶ 947 ರಲ್ಲಿ ಸ್ಥಾಪಿಸಿರುವುದಾಗಿ ಗೊತ್ತಾಗುತ್ತದೆ. ಈ ಐತಿಹಾಸಿಕ ಹಿನ್ನೆಲೆಯೇ ಪರ್ಷಂಪ್ರತೀ ಲಕ್ಷಾಂತರ ಭಕ್ತರನ್ನು ಇಲ್ಲಿಗೆ ಸೆಳೆಯುತ್ತದೆ. ಎರ್ನಾಕುಲಂನಿಂದ ಕೇವಲ 8 ಕಿಮೀ ಅಂತರದಲ್ಲಿ ಈ ದೇವಾಲಯವಿದ್ದು, ಸುಲಭವಾಗಿ ಇಲ್ಲಿಗೆ ತಲುಪಬಹುದಾಗಿದೆ. ಆಳೆತ್ತರದ ಶಿಲ್ಪಗಳು, ಹಿಂದಿನ ಕಾಲದ ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಬಿಂಬಿಸುವ ದೇವಾಲಯದ ಒಳಾಂಗಣ ಮತ್ತು ಹೊರಾಂಗಣಗಳು ಕಣ್ಮನ ಸೆಳೆಯುತ್ತದೆ. ಈ ದೇವಾಲಯದ ಮುಖ್ಯ ದೇವರಾದ ಶಾಂತನಗೋಪಾಲ ಕೃಷ್ಣಸ್ವಾಮಿಯನ್ನು ವಿಷ್ಣುವಿನ ಅವತಾರವೆಂದು ನಂಬಲಾಗಿದೆ. ಶಾಂತನಗೋಪಾಲಮೂರ್ತಿ ಎಂಬ ಪದಕ್ಕೆ ಇಲ್ಲಿ ಶಿಶುಗಳ ರಕ್ಷಕ ಎಂಬ ಅರ್ಥವೂ ಇದೆ. ಪಟ್ಟಣದ ವಿವಿಧ ಸ್ಥಳಗಳಿಂದ ಇಲ್ಲಿಗೆ ಸಾಕಷ್ಟು ಬಸ್ಸುಗಳು ಸಿಗುತ್ತವೆ.


Click it and Unblock the Notifications