ಚೈನೀಸ್ ಮೀನುಬಲೆಯು ಹೆಸರೇ ಹೇಳುವಂತೆ ಚೀನಾ ಮೂಲದ್ದು. ಈ ಮೀನುಬಲೆಯು ಭಾರತದಲ್ಲೇ ಮೊದಲ ಬಾರಿಗೆ ಕೊಚ್ಚಿಯಲ್ಲಿ ಚೀನಾದ ಪ್ರವಾಸಿಗ ಝೆಂಗ್ ಹೆಯಿಂದ ಪ್ರಯೋಗಿಸಲ್ಪಟ್ಟಿತು. ಈ ಬಲೆಗಳನ್ನು ಸುಮಾರು 14ನೇ ಶತಮಾನದಲ್ಲಿ ಕೊಚ್ಚಿಯಲ್ಲಿ ಮೊದಲ ಬಾರಿಗೆ ಉಪಯೋಗಿಸಲ್ಪಟ್ಟಿತು. ಚೈನೀಸ್ ಮೀನು ಬಲೆಯ ಜಾಲದಲ್ಲಿ ವೈಪೀನ್ ದ್ವೀಪ ಮತ್ತು ಕೊಚ್ಚಿ ಬಂದರು ಸಂಪರ್ಕವನ್ನು ಹೊಂದಿದೆ. ಈ ಬಲೆಗಳನ್ನು ಬಿದಿರಿನ ಕೋಲಿನಿಂದ ಹಿಡಿದಿಡಲಾಗಿದೆ. ಇದನ್ನು ಸ್ಥಳೀಯರು ಚೀನಾವಾಲಾ ಎಂದು ಕರೆಯುತ್ತಾರೆ. ಸಾಂಪ್ರದಾಯಿಕ ಬಲೆಗಳಿಗಿಂತ ಈ ಚೀನಾ ಬಲೆಗಳಿಂದ ಮೀನು ಹಿಡಿಯುವುದು ತುಂಬಾ ವಿಭಿನ್ನ. ಚೈನೀಸ್ ಮೀನು ಬಲೆಯನ್ನು ಏರಿಸುವುದಕ್ಕೆ ಕನಿಷ್ಟ ಆರು ಜನರಾದರೂ ಬೇಕು. ಪ್ರವಾಸಿಗರೂ ಕೂಡಾ ಚೈನೀಸ್ ಮೀನು ಬಲೆಯನ್ನು ಉಪಯೋಗಿಸಿ ಖುಷಿಪಡಬಹುದು.