Search
  • Follow NativePlanet
Share
ಮುಖಪುಟ » ಸ್ಥಳಗಳು» ಕಿನ್ನೌರ್

ಕಿನ್ನೌರ್: ಸಮೃದ್ಧ ಹಸಿರು ಕಣಿವೆ 

35

ಫೇರಿಟೇಲ್ಸ್ ಭೂಮಿ ಎಂದೇ ಹೆಸರಾಗಿರುವ ಕಿನ್ನೌರ್ ಹಿಮಾಚಲ ಪ್ರದೇಶ ಜಿಲ್ಲೆಯಲ್ಲಿರುವ ಸುಂದರ ಪ್ರದೇಶಗಳಲ್ಲಿ ಒಂದಾಗಿದೆ. ಸುತ್ತುವರಿದ ಹಿಮ ಪರ್ವತಗಳು, ಸಮೃದ್ಧ ಹಸಿರು ಕಣಿವೆಗಳು ಇಲ್ಲಿನ ಸೊಬಗನ್ನು ಹೆಚ್ಚಿಸಿದ್ದು, ಪ್ರವಾಸಿಗರನ್ನು ಕೈಬೀಸಿ ಕರೆಯುತ್ತದೆ. ಸಂಪದ್ಭರಿತ ದ್ರಾಕ್ಷಿಯ ತೋಟಗಳು, ಹಣ್ಣಿನ ತೋಟಗಳು ಕಣ್ಮನ ಸೆಳೆಯುತ್ತವೆ. ಇವುಗಳ ಜತೆಗೆ ಅನೇಕ ನದಿಗಳು, ವಿವಿಧ ಪ್ರಭೇದಗಳ ಸಸ್ಯ ಮತ್ತು ಪ್ರಾಣಿಗಳು ಇಲ್ಲಿದ್ದು, ನಿಮ್ಮ ಮನಸನ್ನು ಮುದಗೊಳಿಸುತ್ತವೆ. ಟಿಬೇಟಿಯನ್ ಸಂಸ್ಕೃತಿ ಕಿನ್ನೌರ್ ಅನ್ನು ವ್ಯಾಪಿಸಿದ್ದು, ರಾಜ್ಯದ ಉಳಿದ ಭಾಗಗಳಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಟಿಬೇಟಿಯನ್ನರು ಇಲ್ಲಿದ್ದಾರೆ. 

ಸಾಂಗ್ಲಾ ಮತ್ತು ಹಂಗ್ರಾಂಗ್ ಕಣಿವೆಗಳು ಇಲ್ಲಿನ ಪ್ರಮುಖ ಆಕರ್ಷಣೆಯಾಗಿವೆ. ಹಂಗ್ರಾಂಗ್ ಕಣಿವೆ ಹುಲ್ಲುಗಾವಲಿಗೆ ಪ್ರಸಿದ್ಧವಾಗಿದ್ದರೆ, ಸಾಂಗ್ಲಾ ಕಣಿವೆಯ ಸುಂದರ ತೋಟಗಳು ಕಣ್ಣಿಗೆ ಹಬ್ಬವನ್ನುಂಟು ಮಾಡುತ್ತವೆ. ಮುಗಿಲೆತ್ತರದ ಕೈಲಾಸ ಪರ್ವತ ಇಲ್ಲಿನ ಇನ್ನೊಂದು ಆಕರ್ಷಣೆ. ಕಿನ್ನೌರ್ ಮತ್ತು ಕಲ್ಪಾ ಪ್ರದೇಶಗಳೂ ಕೂಡ ನಿಸರ್ಗ ಸೌಂದರ್ಯಕ್ಕೆ ಹೆಸರಾಗಿವೆ. 

ಕಿನ್ನೌರ್ ಶಿಮ್ಲಾದಿಂದ 267 ಕಿಮಿ ದೂರದಲ್ಲಿದೆ. ಇಲ್ಲೇ ಸಮೀಪದಲ್ಲಿ ವಾಯುನೆಲೆ ಇದ್ದು, ದೆಹಲಿ, ಚಂಡೀಘಢ ಒಳಗೊಂಡಂತೆ ಭಾರತದ ಅನೇಕ ಪ್ರಮುಖ ನಗರಗಳಿಗೆ ಸಂಪರ್ಕ ಕಲ್ಪಿಸುತ್ತದೆ. 224 ಕಿಮೀ ದೂರದಲ್ಲಿ ಇರುವ ಶಿಮ್ಲಾ ರೈಲು ನಿಲ್ದಾಣವೇ ಇಲ್ಲಿಗೆ ಹತ್ತಿರವಾದ ನಿಲ್ದಾಣ. ಇಲ್ಲಿಂದ ಮುಂದೆ ಸಾಕಷ್ಟು ಬಸ್ ವ್ಯವಸ್ಥೆ ಇದ್ದು ಇದರ ಮೂಲಕ ಕಿನ್ನೌರ್ ಅನ್ನು ತಲುಪಬಹುದಾಗಿದೆ.

ವರ್ಷಪೂರ್ತಿ ಮಧ್ಯಮ ವಾತಾವರಣದಿಂದ ಕೂಡಿರುವ ಕಿನ್ನೌರ್ ನಲ್ಲಿ ಜೂನ್ ನಿಂದ ಸೆಪ್ಟೆಂಬರ್ ವರೆಗೆ ಬೇಸಿಗೆ ಇರುತ್ತದೆ. ಅಕ್ಟೋಬರ್ ನಲ್ಲಿ ಶುರುವಾಗುವ ಚಳಿಗಾಲದಲ್ಲಿ ತಾಪಮಾನ ಅತೀ ಕನಿಷ್ಠ ಮಟ್ಟಕ್ಕೆ ಇಳಿಯುತ್ತದೆ. ಈ ಸಮಯದಲ್ಲಿ ಸದಾಕಾಲ ವಿಪರೀತ ಚಳಿ ಇರುವುದರಿಂದ ಇಲ್ಲಿಗೆ ಬರುವವರು ಉಣ್ಣೆಯ ಬಟ್ಟೆಯನ್ನು ತರಲೇಬೇಕು.

ಕಿನ್ನೌರ್ ಪ್ರಸಿದ್ಧವಾಗಿದೆ

ಕಿನ್ನೌರ್ ಹವಾಮಾನ

ಉತ್ತಮ ಸಮಯ ಕಿನ್ನೌರ್

  • Jan
  • Feb
  • Mar
  • Apr
  • May
  • Jun
  • July
  • Aug
  • Sep
  • Oct
  • Nov
  • Dec

ತಲುಪುವ ಬಗೆ ಕಿನ್ನೌರ್

  • ರಸ್ತೆಯ ಮೂಲಕ
    ಪ್ರವಾಸಿಗರು ಶಿಮ್ಲಾ ಹಾಗು ರಾಂಪುರ್ ನಂತಹ ಸಮಿಪದ ಸ್ಥಳಗಳಿಂದ ಕಿನ್ನೌರ್ ಗೆ ಬಸ್ ಮೂಲಕ ಸಂಚರಿಸಬಹುದು. ಬಸ್ ಮತ್ತು ಟ್ಯಾಕ್ಸಿ ಸೇವೆಗಳು ಕೈಗೆಟುಕುವ ಬೆಲೆಯಲ್ಲಿ ಲಭ್ಯವಿದೆ.
    ಮಾರ್ಗಗಳ ಹುಡುಕಾಟ
  • ರೈಲಿನ ಮೂಲಕ
    ರೈಲು ಮೂಲಕ ಹೋದರೂ ಶಿಮ್ಲಾದಲ್ಲಿಯೇ ಇಳಿದುಕೊಳ್ಳಬೇಕು. ಶಿಮ್ಲಾ ರೈಲು ನಿಲ್ದಾಣವು ಭಾರತದ ಪ್ರಮುಖ ನಗರಗಳಿಗೆ ಸಂಪರ್ಕ ಕಲ್ಪಿಸುತ್ತದೆ. ಇಲ್ಲಿಂದ ಮುಂದೆ ಟ್ಯಾಕ್ಸಿಗಳು ಮತ್ತು ಕ್ಯಾಬ್ ಗಳ ಮೂಲಕ ಪ್ರಯಾಣ ಮುಂದುವರೆಸಬಹುದು.
    ಮಾರ್ಗಗಳ ಹುಡುಕಾಟ
  • ಆಕಾಶದ ಮೂಲಕ
    ಶಿಮ್ಲಾ ವಿಮಾನ ನಿಲ್ದಾಣದಲ್ಲಿ ಇಳಿದು ಕಿನ್ನೌರ್ ತಲುಪಬಹುದು. ಜಿಲ್ಲೆಯ ಮುಖ್ಯ ಗ್ರಾಮ ಕಲ್ಪಾದಿಂದ ಈ ವಿಮಾನ ನಿಲ್ದಾಣದಿಂದ 267 ಕಿಮಿ ದೂರ ಇದೆ. ಶಿಮ್ಲಾ ವಾಯುನೆಲೆಯು, ದೆಹಲಿ ಮತ್ತು ಕುಲ್ಲು ಹಾಗೂ ಭಾರತದ ಇತರೆ ಪ್ರಮುಖ ನಗರಗಳೊಂದಿಗೆ ಸಂಪರ್ಕ ಕಲ್ಪಿಸುತ್ತದೆ. ಇಲ್ಲಿಂದ ಮುಂದೆ ಟ್ಯಾಕ್ಸಿ, ಬಸ್ ಮೂಲಕ ಪ್ರಯಾಣ ಮುಂದುವರೆಸಬಹುದು.
    ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
26 Apr,Sun
Return On
27 Apr,Mon
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
26 Apr,Sun
Check Out
27 Apr,Mon
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
26 Apr,Sun
Return On
27 Apr,Mon