ಖೀಚನ್ ಹಳ್ಳಿಯಲ್ಲಿರುವ ಖೀಚನ್ ಪಕ್ಷಿ ಧಾಮವು, ವಲಸೆ ಬರುವ ಪಕ್ಷಿಗಳ ಆವಾಸ ಸ್ಥಾನವಾಗಿದೆ. ಈ ನೈಸರ್ಗಿಕ ಪಕ್ಷಿ ಧಾಮವು ನೈರುತ್ಯ ಯುರೋಪ್, ಕಪ್ಪು ಸಮುದ್ರ ಪ್ರದೇಶ, ಪೊಲ್ಯಾಂಡ್, ಉಕ್ರೇನ್, ಕಝಕಿಸ್ತಾನ್, ಉತ್ತರ ಮತ್ತು ದಕ್ಷಿಣ ಆಫ್ರಿಕಾ ಮತ್ತು ಮಂಗೋಲಿಯಾ ದೇಶಗಳಿಂದ ಬರುವ ಕುರ್ಜನ್, ಕರ್ಕರಾ ಮತ್ತು ಕುಂಚ್ ಎಂಬ ಮೂರು ವಿಧದ ಹಕ್ಕಿಗಳಿಗೆ ಆಶ್ರಯ ತಾಣವಾಗಿದೆ. ಈ ಪಕ್ಷಿಗಳನ್ನು ಬಹುಸಂಖ್ಯೆಯಲ್ಲಿ, ಈ ಪ್ರದೇಶದಲ್ಲಿ ಕಾಣಬಹುದಾಗಿದೆ ಅದೂ ಕೂಡ ಅಕ್ಟೋಬರ್ ಮತ್ತು ಮಾರ್ಚ್ ನ ನಡುವಿನ ಅವಧಿಯಲ್ಲಿ. ಏಕೆಂದರೆ, ಈ ಸಮಯವು ಈ ಪಕ್ಷಿಗಳ ಮೂಲ ಪ್ರದೇಶಗಳಲ್ಲಿ ಅತಿಯಾದ ಚಳಿಗಾಲವಿರುವುದರಿಂದ, ಅದನ್ನು ತಪ್ಪಿಸಿಕೊಳ್ಳಲು ಇವು ಭಾರತಕ್ಕೆ ವಲಸೆ ಬರುತ್ತವೆ.ಪ್ರತಿ ವರ್ಷ ಭಾರತಕ್ಕೆ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಪಕ್ಷಿಗಳು ಭೇಟಿ ನೀಡುತ್ತವೆಯಾದರೂ, ಅವುಗಳಲ್ಲಿ ಸುಮಾರು ನಾಲ್ಕರಿಂದ ಆರು ಸಾವಿರ ಹಕ್ಕಿಗಳು ಖೀಚನ್ ಪಕ್ಷಿಧಾಮಕ್ಕೆ ಭೇಟಿ ನೀಡುತ್ತವೆ. ಇಲ್ಲಿ ಕಾಣಸಿಗುವ ಸುಮಾರು ಮೂರು ಅಡಿ ಉದ್ದ ಹೊಂದಿರುವ ಕುರ್ಜನ್ ಹಕ್ಕಿಯು 4 ರಿಂದ 6 ಕೆ.ಜಿಯವರೆಗೆ ತೂಗುತ್ತದೆ ಮತ್ತು ಕುರ್-ಕುರ್ ಎಂದು ಸದ್ದು ಮಾಡುತ್ತದೆ. ಈ ರೀತಿಯಾಗಿ ಸದ್ದು ಮಾಡುವುದರಿಂದಲೇ ಇವುಗಳನ್ನು ಸ್ಥಳೀಯವಾಗಿ ಕುರ್ಜಾನ್ ಎಂದು ಕರೆಯಲಾಗುತ್ತದೆ. ಈ ಪಕ್ಷಿಯು ಪ್ರತಿ ಘಂಟೆಗೆ 40-60 ಕಿ.ಮೀ ವೇಗದಲ್ಲಿ ಹಾರುವ ಸಾಮರ್ಥ್ಯ ಹೊಂದಿದ್ದು ದೂರ ಪ್ರಯಾಣ ಮಾಡಬಲ್ಲುದಾಗಿದೆ. ಇವು ತಮ್ಮ ವಿಶಿಷ್ಟ ಬಗೆಯ ಗುಣಲಕ್ಷಣಗಳಿಂದ ನೋಡಲು ಆಕರ್ಷಣೀಯವಾಗಿವೆ.ಪಕ್ಷಿ ವಿಕ್ಷಕರ ಸಮುದಾಯದಲ್ಲಿ, ಖೀಚನ್ ಪಕ್ಷಿ ಧಾಮವು ಅತ್ಯಂತ ಪ್ರಖ್ಯಾತಿಯನ್ನು ಪಡೆದಿದ್ದು, ಪ್ರತಿ ವರ್ಷ ಹಲವಾರು ಸಂಖ್ಯೆಯಲ್ಲಿ ಪ್ರಕೃತಿ ಪ್ರಿಯರು ಇಲ್ಲಿಗೆ ಭೇಟಿ ನೀಡುತ್ತಾರೆ.


Click it and Unblock the Notifications