ಇಂದಿರಾ ಸಾಗರ ಅಣೆಕಟ್ಟು ಏಷ್ಯಾದ ಅತಿ ಪ್ರತಿಷ್ಠಿತ ಜಲವಿದ್ಯುತ್ ಯೋಜನೆ. ಈ ಬಹುಪಯೋಗಿ ಅಣೆಕಟ್ಟನ್ನು ಖಾಂಡ್ವಾದ ನರ್ಮದಾನಗರದಲ್ಲಿರುವ ನರ್ಮದಾ ನದಿಯ ಮೇಲೆ ಕಟ್ಟಲಾಗಿದೆ. ಇದರ ಅಡಿಪಾಯ ಹಾಕಿದವರು ಭಾರತದ ಅಂದಿನ ಪ್ರಧಾನ ಮಂತ್ರಿ ಶ್ರೀಮತಿ ಇಂದಿರಾ ಗಾಂಧಿ, ಅಕ್ಟೋಬರ್ 23, 1984ರಂದು. ಇದರ ಬೃಹತ್ತಾದ ಆಕಾರದಿಂದಲೇ ಇದು ಆಕರ್ಷಕ ಪ್ರವಾಸಿ ತಾಣವೆನಿಸಿಕೊಂಡಿದೆ.
ಗೋಸಿಖುರ್ದ್ ಯೋಜನೆ ಎಂದೂ ಕರೆಯಲಾಗುವ ಈ ಅಣೆಕಟ್ಟನ್ನು ಭಂಡಾರ, ನಾಗಪುರ, ಚಂದ್ರಾಪುರ ಜಿಲ್ಲೆಗಳಲ್ಲಿನ ಪುಟ್ಟ ಹಳ್ಳಿಗಳಿಗೆ ನೀರು ಸರಬರಾಜು ಮಾಡಬೇಕೆಂಬ ಉದ್ದೇಶದಿಂದ ಕಟ್ಟಲಾಗಿದೆ. ಇದರ ಎತ್ತರ 92 ಮೀಟರ್ ಮತ್ತು ಉದ್ದ 653 ಮೀ. ಇದು ಖಾಂಡ್ವಾದಿಂದ 61 ಕಿ.ಮೀ. ದೂರದಲ್ಲಿದೆ. ನೀವು ಉತ್ಸಾಹಿ ಪ್ರವಾಸಿಗರಾಗಿದ್ದರೆ, ಈ ಅದ್ಭುತವಾದ ಅಣೆಕಟ್ಟನ್ನು ಕಾಣಲು ಎರಡು ಮಾರ್ಗ ಅನುಸರಿಸಿ ತಲುಪಬಹುದು. ಒಂದು ಖಾಂಡ್ವಾ ರೈಲು ನಿಲ್ದಾಣದಿಂದ ಅಥವಾ ಬಿರ್ ರೈಲು ನಿಲ್ದಾಣದಿಂದ.


Click it and Unblock the Notifications