Search
  • Follow NativePlanet
Share
ಮುಖಪುಟ » ಸ್ಥಳಗಳು » ಖಜುರಾಹೊ » ಆಕರ್ಷಣೆಗಳು » ರಾಜ್ಯ ಬುಡಕಟ್ಟು ಮತ್ತು ಜನಪದ ಕಲೆಗಳ ವಸ್ತು ಸಂಗ್ರಹಾಲಯ

ರಾಜ್ಯ ಬುಡಕಟ್ಟು ಮತ್ತು ಜನಪದ ಕಲೆಗಳ ವಸ್ತು ಸಂಗ್ರಹಾಲಯ, ಖಜುರಾಹೊ

1

ರಾಜ್ಯ ಬುಡಕಟ್ಟು ಮತ್ತು ಜನಪದ ಕಲೆಗಳ ವಸ್ತು ಸಂಗ್ರಹಾಲಯವು ಖಜುರಾಹೊದ ಅತ್ಯಂತ ಪ್ರಸಿದ್ಧ ಪ್ರವಾಸಿ ಆಕರ್ಷಣೆಯಾಗಿದೆ. ಈ ವಸ್ತು ಸಂಗ್ರಹಾಲಯವು ಖಜುರಾಹೊದಲ್ಲಿರುವ ಚಂಡೇಲ ಸಾಂಸ್ಕೃತಿಕ ಸಂಕೀರ್ಣದಲ್ಲಿ ನೆಲೆಗೊಂಡಿದೆ. ಈ ವಸ್ತು ಸಂಗ್ರಹಾಲಯವು ಅಷ್ಟೇನು ದೊಡ್ಡದಲ್ಲ. ಆದರೂ ಇದರಲ್ಲಿರುವ ಶ್ರೀಮಂತ ಸಂಗ್ರಹವು ಗಮನ ಸೆಳೆಯುತ್ತದೆ.

ಈ ವಸ್ತು ಸಂಗ್ರಹಾಲಯವು ವಾಣಿಜ್ಯ ಮತ್ತು ವ್ಯವಹಾರ ಹಾಗು ಇತರ ಮೂಲಗಳ ಮೂಲಕ ಭಾರತೀಯ ಸಂಪ್ರದಾಯ ಮತ್ತು ಸಂಸ್ಕೃತಿಗಳು ಹಾಗು ಇಲ್ಲಿನ ಸ್ಥಳೀಯ ಸಂಸ್ಕೃತಿ ಹೇಗೆ ವಿದೇಶಿ ಸಂಸ್ಕೃತಿಯೊಂದಿಗೆ ಬೆರೆತ ಬಗೆಯನ್ನು ತುಂಬ ಸೊಗಸಾಗಿ ಬಿಂಬಿಸಿದೆ. ಈ ವಸ್ತು ಸಂಗ್ರಹಾಲಯದಲ್ಲಿ ಸ್ಥಳೀಯ ಕಾಡುಗಳಲ್ಲಿ ವಾಸಿಸುತ್ತಿರುವ ಬುಡಕಟ್ಟು ಜನರ ಅನುಪಮವಾದ ಜನಪದ ಕಲೆಗಳ ಶ್ರೀಮಂತ ಸಂಗ್ರಹವನ್ನು ನಾವು ನೋಡಬಹುದು. ಬುಡಕಟ್ಟು ಜನರ ಜೀವನ ಶೈಲಿಯನ್ನು ಬಿಂಬಿಸುವ ಹಲವಾರು ಕಲಾವಸ್ತುಗಳನ್ನು ಸಂಗ್ರಹಿಸಿಡಲಾಗಿದೆ.

ಇದರ ಜೊತೆಗೆ ಈ ಸಂಗ್ರಹಾಲಯವು ಬುಡಕಟ್ಟು ಜನರ ಸಾಂಪ್ರದಾಯ ಮತ್ತು ಕಟ್ಟು ಪಾಡುಗಳ ಸಂಕ್ಷಿಪ್ತವಾದ ಇತಿಹಾಸವನ್ನು ತಿಳಿಸಿಕೊಡುತ್ತದೆ. ಈ ವಸ್ತು ಸಂಗ್ರಹಾಲಯದ ಪ್ರದರ್ಶನ ಶಾಲೆಯಲ್ಲಿ ಟೆರ್ರಾಕೋಟಾ, ಮರದ ಕುಶಲ ವಸ್ತುಗಳು, ಲೋಹದ ಕಲಾ ವಸ್ತುಗಳು, ಜನಪದ ವರ್ಣ ಚಿತ್ರಗಳು ಇತ್ಯಾದಿ ವಸ್ತುಗಳನ್ನು  ನಾವು ಕಾಣಬಹುದು. ಈ ಎಲ್ಲಾ ಕಾರಣಗಳಿಂದಾಗಿ ಈ ವಸ್ತು ಸಂಗ್ರಹಾಲಯವು ಖಜುರಾಹೊದ ನೋಡಲೆ ಬೇಕಾದ ಸ್ಥಳವಾಗಿ ಗುರುತಿಸಿಕೊಂಡಿದೆ.

One Way
Return
From (Departure City)
To (Destination City)
Depart On
28 Mar,Thu
Return On
29 Mar,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
28 Mar,Thu
Check Out
29 Mar,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
28 Mar,Thu
Return On
29 Mar,Fri