Search
  • Follow NativePlanet
Share
ಮುಖಪುಟ » ಸ್ಥಳಗಳು » ಖಜುರಾಹೊ » ಆಕರ್ಷಣೆಗಳು » ರನೆಹ್ ಜಲಪಾತ

ರನೆಹ್ ಜಲಪಾತ, ಖಜುರಾಹೊ

1

ರನೆಹ್ ಜಲಪಾತವು  ಖಜುರಾಹೊ ಪಟ್ಟಣದಿಂದ 22 ಕಿ.ಮೀ ದೂರದಲ್ಲಿರುವ ಛತ್ರಪುರ್ ಜಿಲ್ಲೆಯಲ್ಲಿ ನೆಲೆಗೊಂಡಿದೆ. ಈ ಜಲಪಾತವು ನೋಡಲು ಅತ್ಯಂತ ಭವ್ಯವಾಗಿದ್ದು, ಕೆ ನದಿಯಿಂದ ಉದ್ಭವವಾಗುತ್ತದೆ. ಈ ಕೆನ್ ನದಿಯು 5 ಕಿ.ಮೀ ಉದ್ದ ಮತ್ತು 30 ಮೀಟರ್ ಆಳವಿರುವ ಒಂದು ದೊಡ್ಡ ಕಮರಿಯನ್ನು ನಿರ್ಮಾಣ ಮಾಡಿದೆ. ಈ ಕಮರಿಯು ಸ್ಫಟಿಕದಂತಹ ಗ್ರಾನೈಟ್ ಕಲ್ಲುಗಳಿಂದ ನಿರ್ಮಾಣಗೊಂಡಿದೆ. ಈ ಕಲ್ಲುಗಳು ನೇರಳೆ ಬಣ್ಣದಿಂದ ಹಿಡಿದು ಬೂದು ಬಣ್ಣದವರೆಗೆ ಹಲವು ಬಗೆಯ ಬಣ್ಣಗಳನ್ನು ಪ್ರತಿಫಲಿಸುತ್ತದೆ.

ಈ ಕಮರಿಯಲ್ಲಿ ಬೇರೆ ಬೇರೆ ಗಾತ್ರದ ಹಲವು ಜಲಪಾತಗಳು ಧುಮ್ಮಿಕ್ಕುತ್ತವೆ. ಇವುಗಳಲ್ಲಿ ಕೆಲವು ವರ್ಷಪೂರ್ತಿ ಕಾಣ ಸಿಕ್ಕರೆ, ಕೆಲವು ಬೇಸಿಗೆಯಲ್ಲಿ ಮರೆಯಾಗಿ, ಮಳೆಗಾಲಗಳಲ್ಲಿ ಮಾತ್ರ ತಮ್ಮ ಪ್ರತಾಪ ತೋರುವ ಜಲಪಾತಗಳಾಗಿವೆ. ರನೆಹ್ ಜಲಪಾತವು ಪನ್ನ ರಾಷ್ಟ್ರೀಯ ಉದ್ಯಾನವನಕ್ಕೆ ಹೊಂದಿಕೊಂಡಂತಿದೆ. ಈ ಸ್ಥಳದ ಸೌಂದರ್ಯವು ತನ್ನ ಭವ್ಯತೆಯಿಂದಾಗಿ ಗಮನ ಸೆಳೆಯುತ್ತದೆ. ಇಲ್ಲಿನ ಕಾಡಿನ ಹಚ್ಚ ಹಸಿರು, ಮತ್ತು ಜಲಪಾತದಲ್ಲಿ ಜುಳು ಜುಳು ಎಂದು ಹರಿಯುವ ನೀರು ಎರಡೂ ಸೇರಿ ಈ ಸ್ಥಳವನ್ನು ನಯನಮನೋಹರವನ್ನಾಗಿ ಮಾಡಿವೆ.ರನೆಹ್ ಜಲಪಾತಕ್ಕೆ ಭೇಟಿ ಕೊಡುವ ಪ್ರವಾಸಿಗರು ತಮ್ಮೊಂದಿಗೆ ಅದ್ಭುತವಾದ ನೆನಪುಗಳನ್ನು ಕೊಂಡೊಯ್ಯುತ್ತಾರೆ ಎಂಬುದರಲ್ಲಿ ಸಂಶಯವಿಲ್ಲ.

One Way
Return
From (Departure City)
To (Destination City)
Depart On
09 Jun,Tue
Return On
10 Jun,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
09 Jun,Tue
Check Out
10 Jun,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
09 Jun,Tue
Return On
10 Jun,Wed