ದುಲ್ಹದೇವ್ ದೇವಾಲಯವು ಖಜುರಾಹೊದ ದಕ್ಷಿಣ ಸಮೂಹದ ದೇವಾಲಯಗಳಿಗೆ ಸೇರಿದೆ. ಈ ದೇವಾಲಯವನ್ನು ಚಂಡೇಲರು 1130ರಲ್ಲಿ ನಿರ್ಮಿಸಿದರು. ಈ ದೇವಾಲಯವು ಆವರ ಶ್ರೀಮಂತ ಕಲೆ ಮತ್ತು ವಾಸ್ತುಶಿಲ್ಪದ ಶೈಲಿಯನ್ನು ಇಂದಿಗು ಪ್ರತಿಬಿಂಬಿಸುತ್ತಿದೆ. ಈ ದೇವಾಲಯದಲ್ಲಿ ಐದು ಸಣ್ಣ ಕೋಣೆ ಹಾಗು ಮುಚ್ಚಲ್ಪಟ್ಟ ಒಂದು ಚಾವಡಿಯನ್ನು ಹೊಂದಿದೆ. ದುಲ್ಹದೇವ್ ದೇವಾಲಯವನ್ನು ಶಿವನಿಗಾಗಿ ನಿರ್ಮಿಸಲಾಗಿದೆ. ಈ ದೇವಾಲಯವನ್ನು ಶಿವನ ಮತ್ತು ಪಾರ್ವತಿ ದೇವಿಯರ ಹಲವು ವಿಗ್ರಹಗಳ ಸಹಾಯದಿಂದ ಅಲಂಕರಿಸಲಾಗಿದೆ.
ಇಲ್ಲಿನ ಪ್ರತಿ ಶಿಲ್ಪದಲ್ಲಿ ಅಂದಿನ ಕಾಲದ ಶಿಲ್ಪಿಗಳ ಪ್ರೌಢಿಮೆಯು ಕಾಣುತ್ತದೆ. ಈ ದೇವಾಲಯದ ಒಳಭಾಗದಲ್ಲಿ ಸುಂದರವಾದ ಶಿವಲಿಂಗದ ಸುಂದರ ವಿಗ್ರಹವಿದೆ. ಒಳಭಾಗದ ಗೋಡೆಗಳಲ್ಲಿ ಮತ್ತು ಚಾವಣಿಗಳಲ್ಲಿ ಯಥೇಚ್ಛವಾದ ಸೂಕ್ಷ್ಮ ಕೆತ್ತನೆಗಳನ್ನು ನಾವು ಗಮನಿಸಬಹುದು. ಇಲ್ಲಿನ ಮಂತ್ರ ಮುಗ್ಧಗೊಳಿಸುವಂತಹ ವಿಗ್ರಹಗಳನ್ನು ಮತ್ತು ಕೆತ್ತನೆಗಳನ್ನು ವೀಕ್ಷಿಸಲು ಪ್ರವಾಸಿಗರು ಇಲ್ಲಿಗೆ ಆಗಮಿಸುತ್ತಿರುತ್ತಾರೆ.


Click it and Unblock the Notifications