Search
  • Follow NativePlanet
Share
ಮುಖಪುಟ » ಸ್ಥಳಗಳು » ಖಜುರಾಹೊ » ಆಕರ್ಷಣೆಗಳು » ಆದಿನಾಥ್ ದೇವಾಲಯ

ಆದಿನಾಥ್ ದೇವಾಲಯ, ಖಜುರಾಹೊ

3

ಆದಿನಾಥ್ ದೇವಾಲಯವು ಖಜುರಾಹೊದಲ್ಲಿರುವ ಜೈನ ದೇವಾಲಯಗಳಲ್ಲಿ ಅತ್ಯಂತ ಪ್ರಮುಖವಾದ ದೇವಾಲಯವಾಗಿದೆ. ಇದು ಪಾರ್ಶ್ವನಾಥ ದೇವಾಲಯದ ಉತ್ತರ ಭಾಗದಲಿ ನೆಲೆಗೊಂಡಿದೆ. ಜೈನರ ಸಂತನಾದ ಆದಿನಾಥರಿಗಾಗಿ ನಿರ್ಮಿಸಲಾದ ಈ ದೇವಾಲಯವನ್ನು ಚಂಡೇಲ ರಾಜರು 11 ನೇ ಶತಮಾನದಲ್ಲಿ ನಿರ್ಮಿಸಿದರು. ಈ ದೇವಾಲಯವು ಸಪ್ತ- ರಥ ಸೂತ್ರದ ಆಧಾರದ ಮೇಲೆ ನಿರ್ಮಾಣಗೊಂಡಿದೆ. ಈ ದೇವಾಲಯವು ಏಕ ಗೋಪುರದ ಶಿಖರದಿಂದ ಅಲಂಕೃತಗೊಂಡಿದೆ. ಇದು ಈ ಗುಡಿಯ ಅಂದವನ್ನು ಹೆಚ್ಚಿಸಿದೆ.

ಈ ದೇವಾಲಯದ ಗುಡಿಯ ಗೋಡೆಯ ಮೇಲೆ ಆಸ್ಥಾನ ಸಂಗೀತ ವಿದ್ವಾಂಸರ ಸುಂದರ ಚಿತ್ರಗಳನ್ನು ಕೆತ್ತಲಾಗಿದೆ. ಇದರ ಜೊತೆಗೆ ಈ ಗೋಡೆಗಳಲ್ಲಿ ಆದಿನಾಥರ ಆಸ್ಥಾನದಲ್ಲಿದ್ದ ಪ್ರಸಿದ್ಧ ನೃತ್ಯಕಾರ್ತಿಯಾದ ನೀಲಾಂಜನೆಯ ಅತ್ಯಂತ ಸ್ಫುಟವಾದ ನೃತ್ಯ ಶೈಲಿಯನ್ನು ಚಿತ್ರಿಸಲಾಗಿದೆ. ನಾಯಿಕೆಯರು, ಕಾಮಿನಿಯರು ಮತ್ತು ಭಾಮಿನಿಯರ ಚಿತ್ರಗಳನ್ನು ಸಹ ಇಲ್ಲಿ ಕೆತ್ತಲಾಗಿದೆ. ಹೀಗೆ ಪ್ರತಿ ಗೋಡೆಯಲ್ಲಿ ಅನುಪಮವಾದ ಕೆತ್ತನೆಗಳನ್ನು ಕೆತ್ತಿರುವ ಹಾಗು ಶಿಲ್ಪಿಯ ಶಿಲ್ಪಕಲಾ ನೈಪುಣ್ಯವನ್ನು ಸವಿಯಲೆಂದು ಪ್ರತಿದಿನ ಹಲವಾರು ಪ್ರವಾಸಿಗರು ಇಲ್ಲಿಗೆ ಬರುತ್ತಿರುತ್ತಾರೆ.

One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Mar,Tue
Check Out
11 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Mar,Tue
Return On
11 Mar,Wed