ಕೇದಾರನಾಥ ಪರ್ವತದ ಸಾಲಿನಲ್ಲಿ ಕೇದಾರನಾಥ ದೇವಾಲಯ ಸ್ಥಾಪಿತವಾಗಿದೆ. ಇದೊಂದು ಶಾಶ್ವತ ಧಾರ್ಮಿಕ ಕೇಂದ್ರ ಹಾಗು ಪ್ರಖ್ಯಾತ ಜ್ಯೋತಿರ್ಲಿಂಗ. ಶಿವನ ಪ್ರಮುಖ 12 ಜ್ಯೋತಿರ್ಲಿಂಗಗಳಲ್ಲಿ ಕೇದಾರನಾಥವು ಅತ್ಯಂತ ಮಹತ್ವವುಳ್ಳದ್ದಾಗಿದೆ. ಸರಿ ಸುಮಾರು 3584 ಮೀಟರ್ ಸಮುದ್ರ ಮಟ್ಟದಿಂದ ಎತ್ತರದಲ್ಲಿ ಈ ದೇವಾಲಯ ನೆಲೆಸಿದೆ. 8ನೇ ಶತಮಾನದಲ್ಲಿ ನಿರ್ಮಾಣಗೊಂಡ ಈ ದೇವಾಲಯದ ಸನೀಹದಲ್ಲೆ ಮಂದಾಕಿನಿ ನದಿಯು ಹರಿದಿದೆ. ಈ ದೇವಾಲಯವನ್ನು ಆದಿ ಶಂಕರಾಚಾರ್ಯರು ಸ್ಥಾಪಿಸಿದ್ದಾರೆ. ಪಾಂಡವರು ನಿರ್ಮಿಸಿದ ಎನ್ನಲಾದ ಪುರಾತನ ದೇಗುಲವೊಂದರ ಪಕ್ಕದಲ್ಲೆ ಈ ದೇವಾಲಯವು ನೆಲೆಗೊಂಡಿದೆ. ಇಲ್ಲಿನ ದೇವಾಲಯದ ಸಮ್ಮೇಳನ ಸಭಾಂಗಣದ ಗೋಡೆ ಮೇಲೆ ಸಾಕಷ್ಟು ದೇವಾನುದೇವತೆಗಳ ಮುದ್ರೆ ಅಚ್ಚೊತ್ತಲ್ಪಟ್ಟಿದೆ.
ಇಲ್ಲಿ ನಂದಿ ವಿಗ್ರಹವಿದ್ದು, ಐತಿಹಾಸಿಕ ಹಿನ್ನೆಲೆಯ ಪ್ರಕಾರ, ಇದು ಶಿವನ ದೇವಾಲಯವನ್ನು ಹೊರಗಿನಿಂದ ಕಾಯುವ ಕಾವಲುಗಾರ. ಬೃಹತ್ ಕಲ್ಲು ಬಂಡೆಯೊಂದನ್ನು ಸೀಳಿ ದೇವಾಲಯದ ನಿರ್ಮಾಣಕ್ಕೆ ಬಳಸಲಾಗಿದೆ. ಇದು ಸುಮಾರು 1000 ವರ್ಷ ಹಳೆಯದೆಂದು ನಂಬಲಾಗಿದೆ. ಆಯತಾಕಾರದಲ್ಲಿ ಕಲ್ಲಿನ ಶಿಲೆ ನಿಲ್ಲಿಸಿ ಕಟ್ಟಿದ್ದು ನಿಜಕ್ಕೂ ಅಚ್ಚರಿದಾಯಕ. ದೇವಾಲಯದ ಗರ್ಭಗುಡಿ ಎದುರು ನಿಂತು ಭಕ್ತರು ದೇವರನ್ನು ಪ್ರಾರ್ಥಿಸುತ್ತಾರೆ. ಇನ್ನು ದೇವಾಲಯದ ಆವರಣದಲ್ಲೇ ಒಂದು ಮಂಟಪ ಕೂಡ ಇದೆ. ಇಲ್ಲಿ ಸಾಕಷ್ಟು ಧಾರ್ಮಿಕ ಸಮಾರಂಭಗಳು ನಡೆಯುತ್ತವೆ. ಕೆಲವರ ಪ್ರಕಾರ, ಕುರುಕ್ಷೇತ್ರ ಯುದ್ಧ ಮುಗಿದ ನಂತರ ಪಾಂಡವರು ತಮ್ಮ ಪಾಶ್ಚಾತ್ತಾಪದ ಪ್ರಾರ್ಥನೆ ಸಲ್ಲಿಸಲು ಈ ದೇವಾಲಯಕ್ಕೆ ಆಗಮಿಸಿದ್ದರು. ಮಾನಸಿಕ ನೆಮ್ಮದಿಗಾಗಿ ಪ್ರಾರ್ಥಿಸಿದ್ದರು.


Click it and Unblock the Notifications