ಗೌರಿ ಕುಂಡ ಒಂದು ಚಿಕ್ಕ ಹಳ್ಳಿ. ಕೇದಾರನಾಥದಿಂದ ಟ್ರೆಕ್ಕಿಂಗ್ ಮೂಲಕ ಇಲ್ಲಿಗೆ ತೆರಳಬೇಕು. 1982 ಮೀಟರ್ ಸಮುದ್ರ ಮಟ್ಟದಿಂದ ಇದು ಎತ್ತರದಲ್ಲಿದೆ. ಅತ್ಯಂತ ಪುರಾತನ ಪಾರ್ವತಿ ಮಂದಿರ ಇಲ್ಲಿದೆ. ನಂಬಿಕೆಗಳ ಪ್ರಕಾರ, ಪಾರ್ವತಿ ದೇವಿಯು ಶಿವನೇ ತನ್ನ ಪತಿಯಾಗಬೇಕೆಂದು ಆಶಿಸಿ ತಪಸ್ಸು ಮಾಡಿದ ಸ್ಥಳ ಇದು ಎಂದು ನಂಬಲಾಗುತ್ತದೆ. ಇದೇ ಸ್ಥಳದಲ್ಲಿ ಗೌರಿಕುಂಡ ಎಂಬ ಹೆಸರಿನ ಬಿಸಿನೀರಿನ ಬುಗ್ಗೆಯೂ ಇದೆ. ಇದರಲ್ಲಿ ಪವಿತ್ರ ನೀರಿನಲ್ಲಿ ಸ್ನಾನ ಮಾಡಿದವರ ಚರ್ಮರೋಗ ನಿವಾರಣೆ ಆಗುತ್ತದೆ ಎಂದು ಹೇಳಲಾಗುತ್ತದೆ. ಈ ನೀರಿನಲ್ಲಿ ದೈವಿ ಶಕ್ತಿ ಇದೆ ಎಂದು ನಂಬಲಾಗಿದೆ.


Click it and Unblock the Notifications