ನಮ್ಮ ಹಿಂದೂ ಧರ್ಮದಲ್ಲಿ ರಾಮನ ಚಾರಿತ್ರ್ಯಕ್ಕೆ ವಿಶೇಷವಾದ ಸ್ಥಾನಮಾನ ಇದೆ. ಪ್ರತಿಯೊಬ್ಬನ ಭಾರತೀಯನ ಹೃದಯದಲ್ಲೂ ಈ ಸ್ಥಾನಮಾನ ಹೀಗೆಯೇ ಇರುತ್ತದೆ. ಇದು ಈ ದೇವನ ಮೂರ್ತಿ ಅಥವಾ ಪೂಜೆ ಇರುವ ದೇವಾಲಯ ಇಷ್ಟೊಂದು ಪ್ರಸಿದ್ಧ ಯಾಕೆ ಆಗುತ್ತದೆ ಎಂದು ತೋರಿಸಿಕೊಡುತ್ತದೆ.
ಅಲಹಾಬಾದ್ ನಿಂದ ಸುಮಾರು 30 ಕಿ.ಮೀ ದೂರದಲ್ಲಿ ಈ ದೇವಾಲಯವಿದೆ. ಇದು ರಾಮ ಭಕ್ತರ ಪಾಲಿಗೆ ಅತ್ಯಂತ ಪ್ರಮುಖವಾದ ದೇವಾಲಯವಾಗಿದೆ. ಇದನ್ನು ಎರಡು ದಶಕಗಳ ಹಿಂದೆ ಕಟ್ಟಲಾಗಿದ್ದು ಚಾಯಲ್ ತೆಶಿಲ್ ನಲ್ಲಿದೆ. ಈ ಸುಂದರವಾದ ದೇವಾಲಯ ದೊಡ್ಡ ಸಂಖ್ಯೆಯಲ್ಲಿ ಭಕ್ತಾದಿಗಳನ್ನು ಆಕರ್ಷಿಸುತ್ತದೆ. ರಾಮನವಮಿ ಸಮಯದಲ್ಲಿ ಇಲ್ಲಿ ಭಕ್ತರ ಸಂಖ್ಯೆ ಬಹಳವೇ ಹೆಚ್ಚಾಗಿರುತ್ತದೆ.