ಸುಕ್ರಾಲಾ ದೇವಿಯ ದೇವಸ್ಥಾನ ಹಳೆಯದು. ಚಂಬಾ ಕಣಿವೆಯ ರಾಜಕುಮಾರ ಮಾಧೋ ಸಿಂಗ್ ಈ ದೇವಸ್ಥಾನವನ್ನು ಬೆಟ್ಟದ ಮೇಲೆ ಸಮುದ್ರ ಮಟ್ಟದಿಂದ 3500 ಅಡಿ ಎತ್ತರದಲ್ಲಿ ಕಟ್ಟಿಸಿದ. ಶಾರದಾ ದೇವಿಯ ಮತ್ತು ಮಾಲಾ ದೇವಿಯ ಸನ್ನಿಧಿ ಈ ಸ್ಥಳ ಎಂಬುದಾಗಿಯೂ ಇಲ್ಲಿನ ಸ್ಥಳೀಯರು ನಂಬುತ್ತಾರೆ.
ಕಲ್ಲಿನ ಮೇಲೆ ಕುಳಿತ ಸ್ಥಿತಿಯಲ್ಲಿ ದೇವತೆ ಅವತರಿಸಿದ್ದಾಗಿಯೂ ಜನ ನಂಬುತ್ತಾರೆ. ಸಿಂಹದ ಮೇಲೆ ಕುಳಿತ ದೇವಿಯ ಬೆಳ್ಳಿಯ ವಿಗ್ರಹವನ್ನೂ ಇಲ್ಲಿ ಕಾಣಬಹುದು. ಮಹಿಷಾಸುರ ಮರ್ದಿನಿಯು ಮಹಿಷಾಸುರನ ಮೇಲೆ ನಿಂತ ರೂಪವನ್ನೂ ಇಲ್ಲಿ ಭಕ್ತರು ನೋಡಬಹುದು.


Click it and Unblock the Notifications