ಪುರಾತನ ದೇವಸ್ಥಾನವಾದ ಮಾತಾ ಬಲಾ ಸುಂದ್ರಿ ಕತುವಾದಿಂದ 13 ಕಿಮೀ ದೂರದಲ್ಲಿ ಪರೋಲ್ ಹಳ್ಳಿಯಲ್ಲಿದೆ. ನೂರಾರು ಮಾವಿನ ಮರಗಳಿಂದ ಆವೃತವಾದ ದೇವಸ್ಥಾನ ಬಲಾ ಜಿ ಸುಮದ್ರಿ ದೇವಸ್ಥಾನವೆಂದೇ ಪ್ರಸಿದ್ದಿ.
ಪ್ರಸಿದ್ದ ಪುರಾಣ ಕಥೆಯೊಂದರ ಪ್ರಕಾರ, ಬ್ರಾಹ್ಮಣನೊಬ್ಬ ಹುಲ್ಲು ಕೊಯ್ಯುವಾಗ ತನ್ನ ಕುಡುಗೋಲಿನಿಂದ ಕಲ್ಲಿಗೆ ಹೊಡೆಯುತ್ತಾನೆ. ಕಲ್ಲಿನಿಂದ ರಕ್ತ ಒಸರಲು ಶುರುವಾಗುತ್ತದೆ. ಆ ರಾತ್ರಿ ಬ್ರಾಹ್ಮಣನ ಕನಸಿನಲ್ಲಿ ದೇವತೆಯು ಬಂದು ಆ ಕಲ್ಲನ್ನು ಆಲದ ಮರದ ಅಡಿಯಲ್ಲಿ ಇಡುವಂತೆ ಆಜ್ನೆ ನೀಡುತ್ತಾಳೆ. ಆ ನಂತರ, ಆ ಕಲ್ಲನ್ನು ದೇವತೆಯ ಮರುಜನ್ಮವೆಂದೇ ಭಾವಿಸಲಾಗುತ್ತದೆ. ನವರಾತ್ರಿ ಹಬ್ಬದ ಸಂದರ್ಭದಲ್ಲಿ ಇಲ್ಲಿಗೆ ಲಕ್ಷಾಂತರ ಭಕ್ತರು ಪೂಜೆಗೆ ಬರುತ್ತಾರೆ.


Click it and Unblock the Notifications