ಬನಿ ಎಂಬುದು ಸುಂದರವಾದ ಕಣಿವೆಯಾಗಿದ್ದು ಕತುವಾ ಜಿಲ್ಲೆಯ ಪ್ರಮುಖ ಆಕರ್ಷಣೆ. ಬನಿ ಕಣಿವೆ ಯಾವತ್ತೂ ಹಿಮದಿಂದ ಆವರಿಸಿಕೊಂಡಿರುವ ಕಾರಣಕ್ಕೆ ಇದಕ್ಕೆ ಕತುವಾ ಜಿಲ್ಲೆಯ ಮಿನಿ ಕಾಶ್ಮೀರ ಎಂಬ ಬಿರುದು ಸಿಕ್ಕಿದೆ. ಸೇವಾ ನದಿ ಹರಿಯುವ ಬನಿ ಕಣಿವೆಯು ಸಮುದ್ರ ಮಟ್ಟದಿಂದ 4200 ಅಡಿ ಎತ್ತರದಲ್ಲಿದೆ. ಕಣಿವೆಗೆ ಹೋಗುವ ದಾರಿಯಲ್ಲಿ ಪ್ರವಾಸಿಗರು ಹತ್ತಾರು ಜಲಪಾತ, ದಟ್ಟ ಅರಣ್ಯ, ಹರಿಯುವ ತೊರೆಗಳು ಮತ್ತು ಸುಂದರವಾದ ಹುಲ್ಲುಗಾವಲುಗಳನ್ನು ನೋಡಬಹುದು. ಚಂಬಾ, ಭದೆರ್ವಾ ಮತ್ತು ಉಳಿದ ಗಮ್ಯಸ್ಥಾನಗಳಿಂದ ಬರುವ ಚಾರಣಿಗರು ಬನಿ ಕಣಿವೆಯನ್ನು ತಮ್ಮ ಮೂಲ ಶಿಬಿರವನ್ನಾಗಿ ಮಾಡಿಕೊಳ್ಳುತ್ತಾರೆ.


Click it and Unblock the Notifications