ಐರ್ವಾನ್ ದೇವಸ್ಥಾನ ಶಿವನಿಗೆ ಅರ್ಪಿತವಾಗಿದ್ದು ಕತುವಾದಿಂದ 15 ಕಿಮೀ ದೂರದಲ್ಲಿರುವ ಐರ್ವಾನ್ ಎಂಬ ಗ್ರಾಮದಲ್ಲಿದೆ. ದೇವಸ್ಥಾನದ ಇತಿಹಾಸವು 4 ನೇ ಶತಮಾನಕ್ಕಿಂತಲೂ ಹಳೆಯದು. ಉಜ್ಜೈನ್ ದೊರೆ ವಿಕ್ರಮಾದಿತ್ಯ ಈ ದೇವಸ್ಥಾನವನ್ನು ಕಟ್ಟಿಸಿದನಂತೆ. ರಾವಿ ನದಿಯಿಂದಾಗಿ ಐರ್ವಾನ್ ಗ್ರಾಮಕ್ಕೆ ಹೆಸರು ಬಂದಿದೆ. ಹತ್ತಾರು ನೀರಿನ ಸೆಲೆಗಳು ಇಲ್ಲಿದ್ದು ಭಕ್ತರು ಪೂಜೆಗೆ ಮುನ್ನ ತೊರೆಗಳಲ್ಲಿ ಸ್ನಾನ ಮಾಡುತ್ತಾರೆ.
ಹರಿದ್ವಾರಕ್ಕೆ ಹೋಗಿ ಗಂಗೆಯಲ್ಲಿ ಅಸ್ಥಿ ಬಿಡಲು ಸಾಧ್ಯವಾಗದವರು ಇಲ್ಲಿರುವ ಗುಪ್ತ ಗಂಗೆಯಲ್ಲಿ ಅಸ್ಥಿಗಳನ್ನು ವಿಸರ್ಜಿಸುತ್ತಾರೆ. ವೈಶಾಖ ಮತ್ತು ಶಿವರಾತ್ರಿಯಂದು ದೇವಸ್ಥಾನದಲ್ಲಿ ಲಕ್ಷಾಂತರ ಭಕ್ತರು ಬಂದು ಸೇರುತ್ತಾರೆ.


Click it and Unblock the Notifications