ಕಾಳಿ ನದಿಯ ದಂಡೆಯ ಮೇಲಿರುವ ಜೈ ಸಂತೋಷಿಮಾತಾ ದೇವಸ್ಥಾನವು ಕಾರವಾರ ನಗರದಿಂದ 4 ಕಿ.ಮೀ ದೂರದಲ್ಲಿದೆ. ಜನಪ್ರಿಯ ಜಾನಪದ ಕಥೆಯ ಪ್ರಕಾರ, ಸಂತೋಷಿಮಾತಾ ದೇವಿಯು, ಶಕ್ತಿ ಹಾಗು ಸನ್ನಡತೆಯ ಸಂಕೇತವಾದ ದುರ್ಗಾ ದೇವಿಯ ಮರು ಅವತಾರವಾಗಿದ್ದಾಳೆ. ಇಲ್ಲಿ ವರ್ಷ ಪೂರ್ತಿ ಜರುಗುವ ಉತ್ಸವಗಳಲ್ಲಿ ಅನೇಕ ಭಕ್ತಾದಿಗಳು ಪಾಲ್ಗೊಳ್ಳುತ್ತಾರೆ.ಮತ್ತೊಂದು ಮುಖ್ಯ ವಿಷಯವೆಂದರೆ ಇಲ್ಲಿ ಪ್ರತಿ ಮಂಗಳವಾರ ಹಾಗು ಶುಕ್ರವಾರದಂದು ದೀಪೊತ್ಸವವನ್ನು ಆಚರಿಸಲಾಗುತ್ತದೆ ಮತ್ತು ಅಂದು ಇಡಿ ಸ್ಥಳವು ದೀಪಗಳಿಂದ ಅಲಂಕೃತಗೊಂಡಿರುತ್ತದೆ. ಇಷ್ಟೆ ಅಲ್ಲದೆ, ಮಂಗಳ ಕಾರ್ಯ, ನವರಾತ್ರಿ ಪಲ್ಲಕ್ಕಿ ಉತ್ಸವ ಮತ್ತು ವೃತ ಉದ್ಯಾಪನ ಮುಂತಾದ ಹಲವಾರು ಹಬ್ಬಗಳನ್ನು ಹಮ್ಮಿಕೊಳ್ಳುತ್ತ ಪ್ರತಿ ಶ್ರಾವಣದಂದು ಉಗಾದಿ ಲಕ್ಷದೀಪೊತ್ಸವವನ್ನು ಆಚರಿಸಲಾಗುತ್ತದೆ. ಈ ಸಮಯಗಳಲ್ಲಿ ಬರುವ ಪ್ರವಾಸಿಗರು ಖಂಡಿತವಾಗಿಯು ಇಲ್ಲಿಗೆ ಭೇಟಿ ನೀಡಿ ಹಬ್ಬಗಳ ಆನಂದದಲ್ಲಿ ಪಾಲ್ಗೊಳ್ಳಬಹುದಾಗಿದೆ. ಇನ್ನು ಈ ಸ್ಥಳಕ್ಕೆ ತಲುಪಲು ಹಲವಾರು ಟ್ಯಾಕ್ಸಿ, ಬಸ್ಸು, ಅಟೊರೀಕ್ಷಾಗಳ ಸೇವೆಯು ಲಭ್ಯವಿದೆ.


Click it and Unblock the Notifications