ಕಾರವಾರದಿಂದ 6 ಕಿ.ಮೀ ದೂರದಲ್ಲಿರುವ ಗುದ್ದಲಿ ಬೆಟ್ಟದ ತುದಿಯು ಪ್ರವಾಸಿಗರು ವರ್ಷದ ಯಾವುದೆ ಸಮಯದಲ್ಲಿ ಭೇಟಿ ನೀಡಬಹುದಾದ ಒಂದು ಪ್ರೇಕ್ಷಣೀಯ ಸ್ಥಳವಾಗಿದೆ. ತನ್ನ ಪೂರ್ವ ಭಾಗಕ್ಕೆ ಕಾಳಿ ನದಿ ಹಾಗು ಪಶ್ಚಿಮ ಭಾಗಕ್ಕೆ ಬೆಲಿಕೇರಿ ನದಿಯನ್ನು ಹೊಂದಿದ್ದು ಹೈದರಘಟ್ಟ ಶ್ರೇಣಿಯಲ್ಲಿ ದೊಡ್ಡದಾಗಿರುವ ಈ ಬೆಟ್ಟದ ತುದಿಯು ಸಮುದ್ರ ಮಟ್ಟದಿಂದ 1800 ಅಡಿ ಎತ್ತರದಲ್ಲಿದೆ. ಈ ಬೆಟ್ಟದ ತುದಿಯಲ್ಲಿ ನಿಂತು ನೋಡಿದಾಗ ಅದ್ಭುತ ಸೌಂದರ್ಯರಾಶಿಯು ಕಣ್ಣಿಗೆ ಗೋಚರಿಸುತ್ತಾ ಮೈಮನ ಪುಳಕಿತಗೊಳಿಸುತ್ತದೆ, ಆದರೆ ಇಲ್ಲಿಗೆ ತಲುಪಲು ಸ್ವಲ್ಪ ದೂರ ಚಾರಣ ಮಾಡುವುದು ಅವಶ್ಯವಾಗಿದೆ. ಇತಿಹಾಸಕಾರರ ಪ್ರಕಾರ ಸ್ವಾತಂತ್ರ್ಯಪೂರ್ವದಲ್ಲಿ, ಬ್ರಿಟೀಷರಿಗೆ ಇದೊಂದು ಬೇಸಿಗೆಯ ತಾಣವಾಗಿತ್ತೆಂದು ತಿಳಿದು ಬರುತ್ತದೆ.


Click it and Unblock the Notifications