ಕಾರೈಕಾಲ್ ಅಮ್ಮೈಯಾರ್ ದೇವಾಲಯ, ಇಲ್ಲಿನ ಪ್ರಸಿದ್ಧ ಭಕ್ತಿ ಸಂತಳಾದ ಅಮ್ಮೈಯಾರ್ ಗೆ ಸಮರ್ಪಿತವಾಗಿದೆ. ಈಕೆ 63 ನಯನ್ಮಾರ್ (ಶೈವ ಭಕ್ತಿಗೀತೆ ಕವಿಗಳು)ರ ನಡುವೆ ಜೀವಿಸಿದ್ದ ಏಕೈಕ ಮಹಿಳೆಯಾಗಿದ್ದರು. ಈ ಸಣ್ಣ, ಸುಂದರ ದೇವಾಲಯವನ್ನು 1929 ರಲ್ಲಿ ಮಲೈಪೆರುಮಳ್ ಪಿಳ್ಳೈ ಅವರು ನಿರ್ಮಿಸಿದರು. ಈ ದೇವಾಲಯ ದೇವತೆ ಪುನಿತಾವತಿ ಎಂದು ಪ್ರಸಿದ್ಧವಾಗಿರುವ ಹಿಂದೂ ದೇವತೆಯ ಬೃಹತ್ ವಿಗ್ರಹವನ್ನು ಹೊಂದಿದೆ. ಇಲ್ಲಿನ ಸ್ಥಳೀಯರು ಈ ದೇವತೆಯನ್ನು ಅತಿಮಾನುಷ ಶಕ್ತಿ ಎಂದೇ ಪೂಜಿಸುತ್ತಾರೆ.
ಪುರಾಣದ ಪ್ರಕಾರ, ತನ್ನ ಪತಿ ತನ್ನನ್ನು ಬಿಟ್ಟು ಮತ್ತೊರ್ವ ಮಹಿಳೆಯನ್ನು ಮದುವೆಯಾದಾಗ ಆಕೆ ಶಿವನನ್ನು ಪ್ರಾರ್ಥಿಸುತ್ತಾಳೆ ಮತ್ತು ತನ್ನನ್ನು ರಾಕ್ಷಸಳನ್ನಾಗಿ ಪರಿವರ್ತಿಸುವಂತೆ ಕೇಳಿಕೊಳ್ಳುತ್ತಾಳೆ. ನಂತರ ವರವನ್ನು ಪಡೆದು ಅಲಂಗಡು ಕಾಡಿನಲ್ಲಿ ವಾಸಮಾಡುತ್ತಾಳೆ. ಆಕೆಯ ಭಕ್ತಿಗೆ ಮೆಚ್ಚಿದ ಶಿವ ಅವಳಿಗೆ ತಾಯಿ ಅಮ್ಮೈಯಾರ್ ಎಂಬ ಹೆಸರನ್ನು ನೀಡಿದನು ಮತ್ತು ತಾನು ತಾಂಡವ ನೃತ್ಯ ಮಾಡುವಾಗ ಅವಳು ಹಾಡು ಹೇಳಬೇಕೆಂದು ಆಜ್ಞಾಪಿಸಿದನು ಎನ್ನಲಾಗುತ್ತದೆ. ಪ್ರತಿ ವರ್ಷ ಕರೈಕಲ್ ಅಮ್ಮೈಯಾರ್ ದೇವಾಲಯದಲ್ಲಿ ಆಚರಿಸಲಾಗುವ ’ಮಂಗಣಿ’ ಹಬ್ಬ ತಮಿಳಿನ ಒಂದು ತಿಂಗಳಾದ 'ಆಣಿ' ತಿಂಗಳಿನಲ್ಲಿ ಹುಣ್ಣಿಮೆಯ ದಿನದಂದು ಅಥವಾ ಜೂನ್ ಜುಲೈ ಅವಧಿಯಲ್ಲಿ ಆಚರಿಸಲಾಗುತ್ತದೆ. ಜನರು ಈ ದಿನಗಳಲ್ಲಿ ತಮ್ಮ ಪ್ರಾರ್ಥನೆಗಳನ್ನು ಸಲ್ಲಿಸಲು ಈ ದೇವಾಲಯಕ್ಕೆ ಭೇಟಿ ನೀಡುತ್ತಾರೆ.


Click it and Unblock the Notifications