Search
  • Follow NativePlanet
Share
ಮುಖಪುಟ » ಸ್ಥಳಗಳು » ಕಾರೈಕಾಲ್ » ಹವಾಮಾನ

ಕಾರೈಕಾಲ್ ಹವಾಮಾನ

ಕಾರೈಕಾಲ್ ಗೆ ಭೇಟಿ ನೀಡಲು ಅತ್ಯುತ್ತಮ ಸಮಯ ಅಕ್ಟೋಬರ್ ಮತ್ತು ಮಾರ್ಚ್ ತಿಂಗಳುಗಳ ನಡುವಿನ ಅವಧಿ. ಈ ತಿಂಗಳುಗಳಲ್ಲಿನ ತುಂತುರು ಹವಾಮಾನವು ಇಲ್ಲಿನ ವಾತಾವರಣವನ್ನು ಆಹ್ಲಾದಕರ ಮತ್ತು ತಂಪಾಗಿಡುತ್ತದೆ. ಮಳೆ  ಅಧಿಕವಾಗಿದ್ದರೆ ಪ್ರಯಾಣಕ್ಕೆ ಸೂಕ್ತವಲ್ಲ. ಆದರೆ ಮಳೆಗಾಲದ ಮತ್ತು ಚಳಿಗಾಲದಲ್ಲಿ ಕಾರೈಕಾಲ್ ಪಟ್ಟಣದ ಮರಳು ಕಡಲತೀರದಲ್ಲಿ ಅದ್ಭುತ ಪ್ರಕೃತಿ ಸೌಂದರ್ಯವನ್ನು ಅನುಭವಿಸಬಹುದು.

ಬೇಸಿಗೆಗಾಲ

ಕಾರೈಕಾಲ್ ತಮಿಳುನಾಡಿನ ಸುತ್ತಲಿನ ಇತರೆ ಪ್ರದೇಶಗಳಂತೆ ಅತ್ಯಂತ ಬಿಸಿಯಾದ ಮತ್ತು ಆರ್ದ್ರತೆಯ ಬೇಸಿಗೆಯನ್ನು ಅನುಭವಿಸುತ್ತದೆ. ಬೇಸಿಗೆಯಲ್ಲಿ ತಾಪಮಾನವು 32 ಡಿ.ಸೆ ನಿಂದ  40 ಡಿ ಸೆಲ್ಷಿಯಸ್ ನಷ್ಟು ದಾಖಲಾಗುತ್ತದೆ. ಬೇಸಿಗೆ ತಾಪಮಾನದಿಂದಾಗಿ ಈ ಸಮಯದಲ್ಲಿ ಬಹಳ ಕಷ್ಟಕರ ಪ್ರಯಾಣ ಮಾಡಬೇಕಾಗುತ್ತದೆ. ಆದ್ದರಿಂದ ಈ ಸಮಯದಲ್ಲಿ ಪ್ರಯಾಣ ಮಾದದಿರುವುದೇ ಒಳಿತು. ಆದರೆ ಹಲವಾರು ಯಾತ್ರಿಕರು ಮೇ ಮತ್ತು ಜೂನ್ ತಿಂಗಳುಗಳಲ್ಲಿ ಆಚರಿಸಲಾಗುವ ವಿವಿಧ ಉತ್ಸವಗಳಿಗೆ ಹಾಜರಾಗಲು ಭೇಟಿ ನೀಡುತ್ತಾರೆ.

ಮಳೆಗಾಲ

ಕಾರೈಕಾಲ್ ನಲ್ಲಿ ಹೆಚ್ಚಾಗಿ ಡಿಸೆಂಬರ್ ಮತ್ತು ಅಕ್ಟೋಬರ್ ತಿಂಗಳಲ್ಲಿ ಸಾಧಾರಣ ಮಳೆಯಾಗುತ್ತದೆ. ನವೆಂಬರ್ ತಿಂಗಳಿನಲ್ಲಿ ಸಾಮಾನ್ಯವಾಗಿ ಹೆಚ್ಚಿನ ಮಳೆಯಾಗುತ್ತದೆ. ಆದರೆ, ಮಳೆಯು ಶಾಖದ ಬೇಗೆಯಿಂದ ಜನರಿಗೆ ಸಾಕಷ್ಟು ಪರಿಹಾರ ನೀಡುತ್ತದೆ. ಮಾನ್ಸೂನ್ ಟೈಮ್, ಕಾರೈಕಾಲ್ ಪಟ್ಟಣಕ್ಕೆ ಭೇಟಿ ನೀಡಲು ಅತ್ಯುತ್ತಮ ಅವಧಿಯಾಗಿದೆ.

ಚಳಿಗಾಲ

ಕಾರೈಕಾಲ್ ಪಟ್ಟಣದಲ್ಲಿ ಉಷ್ಣತೆಯಲ್ಲಿ ವ್ಯತ್ಯಾಸ ಅತ್ಯಂತ ಕಡಿಮೆ. ಮಳೆ ನಂತರದ ಚಳಿಗಾಲವು ಕಾರೈಕಾಲ್ ಗೆ ಭೇಟಿ ನೀಡಲು ಆಹ್ಲಾದಕರ ಸಮಯ. ಚಳಿಗಾಲದಲ್ಲಿ ತಾಪಮಾನವು 22 ಡಿ.ಸೆಲ್ಷಿಯಸ್ ನಿಂದ 30 ಡಿ.ಸೆಲ್ಷಿಯಸ್ ದಾಖಲಾಗುತ್ತದೆ. ಚಳಿಗಾಲದಲ್ಲಿ ಬೀಚ್ ಗಳಿಗೆ ಹೋಗಲು ಸೂಕ್ತವಾದ ಸಮಯ. ಈ ಸಮಯದಲ್ಲಿ ಬಹಳಷ್ಟು ಪ್ರವಾಸಿಗರು ಕಾರೈಕಾಲ್ ಮತ್ತು ಅದರ ನೆರೆಯ ಪಟ್ಟಣಗಳಿಗೆ ಭೇಟಿ ನೀಡುತ್ತಾರೆ.