Search
  • Follow NativePlanet
Share
ಮುಖಪುಟ » ಸ್ಥಳಗಳು » ಕಣ್ಣೂರು » ಆಕರ್ಷಣೆಗಳು » ತಲಿಚೇರಿ ಕೋಟೆ

ತಲಿಚೇರಿ ಕೋಟೆ, ಕಣ್ಣೂರು

2

ತಲಚೇರಿ ನಗರದಲ್ಲಿರುವ ಐತಿಹಾಸಿಕ ಕೋಟೆ ಇದಾಗಿದ್ದು ಅನೇಕ ಚಾರಿತ್ರಿಕ ಘಟನೆಗಳನ್ನು ತನ್ನ ಒಡಲಲ್ಲಿ ಇಟ್ಟುಕೊಂಡಿರುವ ತಲಿಚೇರಿ ಕೋಟೆಯನ್ನು ತಲಸೀರಿ ಕೋಟೆ ಎಂಬುದಾಗಿಯೂ ಕರೆಯುತ್ತಾರೆ. ಇದು ಕಣ್ಣೂರಿನಿಂದ ಸುಮಾರು 22 ಕಿ.ಮೀ.ದೂರದಲ್ಲಿದ್ದು ರಸ್ತೆ ಮಾರ್ಗವಾಗಿ ಇಲ್ಲಿಗೆ ಸುಲಭವಾಗಿ ತಲುಪಬಹುದಾಗಿದೆ.1708 ರಲ್ಲಿ ಈಸ್ಟ್ ಇಂಡಿಯಾ ಕಂಪನಿಯು ಈ ಕೋಟೆಯನ್ನು ನಿರ್ಮಿಸಿದ್ದು ನಂತರದ ದಿನಗಳಲ್ಲಿ ವಸಾಹತುಶಾಹಿಗಳು ಇಲ್ಲಿ ನೆಲೆಸಿದ್ದ ಚರಿತ್ರೆಯನ್ನು ಈ ಕೋಟೆ ಹೇಳುತ್ತದೆ.

ಮುಳಾಪಿಲಂಗಡ್ ಸಮುದ್ರ ತೀರದಲ್ಲರುವ ಕಡಿದಾದ ಬಂಡೆಯ ಮೇಲ್ಭಾಗದಲ್ಲಿ ಈ ಕೋಟೆ ಇದ್ದು ಬ್ರಿಟೀಷರ ಕಾಲದಲ್ಲಿ ಇದೊಂದು ಮಿಲಿಟರಿ ಕಾರ್ಯಾಚರಣೆಯ ಕೇಂದ್ರವಾಗಿತ್ತು. ಈ ಕೋಟೆಯ ಅಡಿಪಾಯಕ್ಕೆ ದೊಡ್ಡ ದೊಡ್ಡ ಬಂಡೆಗಳೇ ಇದ್ದು ಸುಂದರ ಶಿಲಾಕೃತಿಗಳನ್ನು ಇಲ್ಲಿ ಕೆತ್ತಲಾಗಿದೆ. ವಿಶೇಷವಾದ ಕಲಾಕೃತಿಗಳಿರುವ ಬಾಗಿಲುಗಳು ಈ ಕೋಟೆಗಿದ್ದು, ಇಲ್ಲಿಂದ ಅರಬ್ಬಿ ಸಮುದ್ರಕ್ಕಿರುವ ಒಂದು ಸುರಂಗ ಮಾರ್ಗವನ್ನೂ ಕೂಡ ಇಲ್ಲಿ ಕಾಣಬಹುದಾಗಿದೆ. ಇಂದು ತಲಿಚೇರಿ ಕೋಟೆ ಅತ್ಯಂತ ಜನಪ್ರಿಯ ಪ್ರವಾಸಿ ಕೇಂದ್ರವಾಗಿದ್ದು ಪ್ರಪಂಚದ ಮೂಲೆ ಮೂಲೆಯಿಂದ ಪ್ರವಾಸಿಗರನ್ನು ಆಕರ್ಷಿಸುತ್ತಿದ್ದು, ಆರ್ಕಿಯಾಲಾಜಿಕಲ್ ಸರ್ವೆ ಆಫ್ ಇಂಡಿಯಾ ಇಲಾಖೆ ಇದರ ನಿರ್ವಹಣೆ ಮಾಡುತ್ತಿದೆ. ಇಲ್ಲಿನ ಪುರಾತನ ಆಂಗ್ಲಿಕನ್ ಚರ್ಚ್, ಅನೇಕ ಬ್ರಿಟೀಷ್ ಅಧಿಕಾರಿಗಳ ಸಮಾಧಿಗಳ ಗೋಪುರಗಳು ಹಾಗೂ ಲಾರ್ಡ್ ವೆಲ್ಲೆಸ್ಸಿ ಬಂಗಲೋ ಈ ಕೋಟೆಗೆ ಹತ್ತಿರದಲ್ಲೇ ಇರುವ ಪ್ರವಾಸಿಗರ ತಾಣವಾಗಿದೆ.

ಸಮಯ :ಬೆಳಗ್ಗೆ 8 ರಿಂದ ಸಂಜೆ 6 ಗಂಟೆ ವರೆಗೆಪ್ರವೇಶ ಶುಲ್ಕ : ಇಲ್ಲ

One Way
Return
From (Departure City)
To (Destination City)
Depart On
12 Jun,Fri
Return On
13 Jun,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
12 Jun,Fri
Check Out
13 Jun,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
12 Jun,Fri
Return On
13 Jun,Sat