Search
  • Follow NativePlanet
Share
ಮುಖಪುಟ » ಸ್ಥಳಗಳು » ಕಣ್ಣೂರು » ಆಕರ್ಷಣೆಗಳು » ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನ

ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನ, ಕಣ್ಣೂರು

1

ಕಣ್ಣೂರಿನ ಹೆಸರಾಂತ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನವು ಇಲ್ಲಿನ ಪಾಯನೂರಿನಲ್ಲಿದೆ. ವಿಷ್ಣುವಿನ ಹತ್ತು ಅವತಾರಗಳಲ್ಲೊಂದಾದ ಪರಶುರಾಮ ದೇವನಿಗೆ ನಿರ್ಮಿಸಿದ ದೇವಸ್ಥಾನ ಇದಾಗಿದೆ. ಸಂಸ್ಕೃತಿಯ ಶ್ರೀಮಂತಿಕೆಗೆ ಹೆಸರುವಾಸಿಯಾಗಿರುವ ಈ ದೇವಾಲಯವನ್ನು ಭ್ರಮರಾಂಭ ಪುರಾಣದಲ್ಲಿಯೂ ಕಾಣಬಹುದಾಗಿದೆ.

ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದ ವಾಸ್ತುಶಿಲ್ಪವು ಅತ್ಯಂತ ವಿಶೇಷವಾದ ಆಕರ್ಷಣೆಯನ್ನು ಹೊಂದಿದ್ದು ಪ್ರವಾಸಿಗರು ಹಾಗೂ ಭಕ್ತರನ್ನು ಸೆಳೆಯುತ್ತದೆ. ಈ ದೇವಾಲಯದ ಹೊರ ಭಾಗದ ಗೋಡೆಯು ಸುಮಾರು 12 ಅಡಿಗಳಿದ್ದು ಉತ್ತಮ ಹಾಗೂ ಆಕರ್ಷಕ ವಾಸ್ತುಶಿಲ್ಪವನ್ನು ಹೊಂದಿದೆ. ದೇವಸ್ಥಾನ ಹಾಗೂ ಅದರ ಎಲ್ಲಾ ಕಟ್ಟಡಗಳೂ ಸುಮಾರು 3 ಎಕರೆ ಪ್ರದೇಶವನ್ನು ಆವರಿಸಿದೆ. ದೇವಸ್ಥಾನದ ಒಳಭಾಗದ ಗರ್ಭಗುಡಿಯು ಎರಡು ಅಂತಸ್ತುಗಳನ್ನು ಹೊಂದಿದೆ. ಇದನ್ನು ಆನೆಯ ಹಿಂಭಾಗದ ರೂಪದಲ್ಲಿ ನಿರ್ಮಿಸಲಾಗಿದೆ.

ದಕ್ಷಿಣ ಭಾರತದ ಎಲ್ಲಾ ದೇವಸ್ಥಾನಗಳಲ್ಲಿರುವ ಪರಿಶುದ್ಧ ಧ್ವಜವನ್ನು ಈ ದೇವಸ್ಥಾನವೂ ಹೊಂದಿದೆ. ಪ್ರವಾಸಿಗರಿಗೆ ತಂಗಲು ಉತ್ತಮ ಸ್ಥಳಾವಕಾಶ ಮಾಡಲಾಗಿದೆ. ದೇವಸ್ಥಾನದ ಮುಂಭಾಗದಲ್ಲಿರುವ ಇಲಾಂಜಿ ಮರವು ವರ್ಷದ ಎಲ್ಲಾ ಕಾಲವೂ ಹೂ ಬಿಡುತ್ತಿದ್ದರೂ ಫಲ ಮಾತ್ರ ಕೊಡುವುದಿಲ್ಲ.

One Way
Return
From (Departure City)
To (Destination City)
Depart On
11 Mar,Wed
Return On
12 Mar,Thu
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
11 Mar,Wed
Check Out
12 Mar,Thu
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
11 Mar,Wed
Return On
12 Mar,Thu