ಸುಮಾರು 290 ಮೀಟರ್ ಎತ್ತರದ ಬೆಟ್ಟಗಳ ಸಾಲಿನಲ್ಲಿ ಹಸಿರುಟ್ಟ ಭೂರಮೆ ನಲಿಯುತ್ತಾ ಎಲ್ಲರನ್ನು ಆಕರ್ಷಿಸುವಳು. ಹಿಂದೆ ಈ ಪ್ರದೇಶ ಒಮ್ಮೆ ಮೂಶಿಕ ಸಂಸ್ಥಾನದ ರಾಜಧಾನಿಯಾಗಿದ್ದು ಐತಿಹಾಸಿಕ ಹಿನ್ನೆಲೆ ಹೊಂದಿದೆ. ಏಳಿಮಲ ಅತ್ಯಂತ ಪ್ರಾಚೀನ ವಾಣಿಜ್ಯ ಹಾಗೂ ವ್ಯಾಪಾರ ಪ್ರದೇಶವಾಗಿ ಜನಪ್ರಿಯತೆಯನ್ನು ಪಡೆದಿದ್ದು ಇಲ್ಲಿಗೆ ಗೌತಮ ಬುದ್ಧನು ಭೇಟಿ ನೀಡಿದ್ದ ಎನ್ನಲಾಗಿದೆ. ರಾಮಾಯಣದಲ್ಲಿ ಬರುವ ಅನೇಕ ಘಟನೆಗಳು ಈ ಪ್ರದೇಶದಲ್ಲಿ ಸಂಭವಿಸಿದೆ ಎಂದು ಈಗಲೂ ಅನೇಕರ ನಂಬಿಕೆಯಾಗಿದೆ.
ಇಲ್ಲಿನ ಹನುಮಂತನ ದೇವಾಲಯ ಹಾಗೂ ಮೌಂಟ್ ಡೆಲಿ ಲೈಟ್ ಹೌಸ್ ಬಹಳ ಆಕರ್ಷಣೀಯ ಪ್ರದೇಶವಾಗಿದೆ. 2009ರ ನಂತರ ಈ ಪ್ರದೇಶ ಭಾರತೀಯ ನೌಕಾ ಸೇನೆಯ ಆಡಳಿತಕ್ಕೆ ಒಳಪಟ್ಟಿದ್ದು ಇಲ್ಲಿಗೆ ಹೋಗಲು ಸಂಬಂಧಪಟ್ಟ ಅಧಿಕಾರಿಗಳ ಅನುಮತಿ ಪಡೆಯಬೇಕಿದೆ.
ಕಣ್ಣೂರಿನಿಂದ 55 ಕಿ.ಮೀ.ದೂರದಲ್ಲಿರುವ ಏಳಿಮಲದ ಸಮುದ್ರ ತೀರ ಅತ್ಯಂತ ಸುಂದರವಾದ ತಾಣವಾಗಿದೆ. ಇದರ ಸಮೀಪದಲ್ಲೇ ಎಟಿಕುಲಂ ಬೇ ಇದೆ, ಇಲ್ಲಿ ಡಾಲ್ಫಿನ್ ಗಳನ್ನು ನೋಡುವುದಕ್ಕೆ ಪ್ರವಾಸಿಗರು ಬರುತ್ತಾರೆ.


Click it and Unblock the Notifications